ಶ್ರೀರಂಗಪಟ್ಟಣ: ಅಳಿವಿನ ಅಂಚಿನಲ್ಲಿರುವ ದೇಸಿ ಗೋವುಗಳ ಸಂರಕ್ಷಣೆಗೆ ಆಗ್ರಹಿಸಿ ಹಿಂದುತ್ವಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧದ ಎದುರು, ರಾಷ್ಟ್ರೀಯ ಗೋವು ಗೌರವ ಸಮರ್ಪಣೆ ಅಭಿಯಾನದ ಅಂಗವಾಗಿ ಕೆಲಕಾಲ ಪ್ರತಿಭಟಿಸಿದರು. ‘ಶತಮಾನಗಳ ಹಿಂದೆ ಭಾರತದಲ್ಲಿ 100ಕ್ಕೂ ಹೆಚ್ಚು ದೇಸಿ ತಳಿಯ ಗೋವುಗಳು ಇದ್ದವು. ಸದ್ಯ 26 ತಳಿಗಳು ಮಾತ್ರ ಉಳಿದಿವೆ. ಗೋಹತ್ಯೆ, ಕೃಷಿಯಲ್ಲಿ ಯಾಂತ್ರೀಕರಣದ ಪ್ರಭಾವ ಇತರ ಕಾರಣಗಳಿಂದ ದೇಸಿ ತಳಿಗಳು ಅವಸಾನ ಹೊಂದುತ್ತಿವೆ’ ಎಂದು ರಾಷ್ಟ್ರೀಯ ಗೋವು ಗೌರವ ಸಮರ್ಪಣೆ ಅಭಿಯಾನದ ತಾಲ್ಲೂಕು ಸಮಿತಿ ಸಂಚಾಲಕ ಕೆ. ಚಂದನ್ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಸಮಿತಿ ಸಂಚಾಲಕ ಬೆಳಗೊಳ ಸುನಿಲ್, ಮುಖಂಡರಾದ ಲಕ್ಷ್ಮಿನಾರಾಯಣ್, ಚಂದಗಾಲು ಶಂಕರ್, ಸತೀಶ್, ರವಿಕಿರಣ್, ಹರ್ಷ, ಚಂದ್ರು, ಬಿ.ಸಿ. ರವಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-40-982354967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.