ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬೆಂಕಿ ಆಕಸ್ಮಿಕದಿಂದ ಪುಟ್ಟೇಗೌಡ ಎಂಬವರ ಮನೆ ಸುಟ್ಟು ಹೋಗಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ತಹಶೀಲ್ದಾರ್ ಚೇತನಾ ಯಾದವ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮನೆ ಪುನರ್ ನಿರ್ಮಾಣಕ್ಕೆ ವಸತಿ ಯೋಜನೆಯಡಿ ಅನುದಾನ ಕೊಡಿಸುವುದಾಗಿ ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು. ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವನ್ನೂ ಸಂತ್ರಸ್ತರಿಗೆ ಅವರು ನೀಡಿದರು. ತಾ.ಪಂ. ಮಾಜಿ ಸದಸ್ಯ ಸಂತೋಷ್, ಕಾಂಗ್ರೆಸ್ ಮುಖಂಡ ಹಂಗರಹಳ್ಳಿ ಗೋವಿಂದೇಗೌಡ ಕೂಡ ಆರ್ಥಿಕ ನೆರವು ನೀಡಿದರು.

‘ಮನೆ ಸಂಪೂರ್ಣ ಸುಟ್ಟು ಹೋಗಿರುವುದರಿಂದ ₹10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಬಟ್ಟೆ, ಪಾತ್ರೆ, ದವಸ–ಧಾನ್ಯ ಎಲ್ಲ ನಾಶವಾಗಿವೆ. ವಾಸ ಮಾಡಲು ಸದ್ಯ ಮನೆ ಇಲ್ಲದಂತಾಗಿದೆ’ ಎಂದು ಪುಟ್ಟೇಗೌಡ ಮತ್ತು ಅವರ ಕುಟುಂಬದ ಸದಸ್ಯರು ಕಣ್ಣೀರು ಹಾಕಿದರು.

‘ಅಡುಗೆ ಮಾಡಲು ಹಚ್ಚಿದ್ದ ಒಲೆಯಿಂದ ಅಟ್ಟಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಇಡೀ ಮನೆಗೆ ಬೆಂಕಿ ವ್ಯಾಪಿಸಿದೆ. ಮನೆಯ ಅಟ್ಟದಲ್ಲಿ ಅಪಾರ ಪ್ರಮಾಣದ ಸೌದೆ, ಪುಸ್ತಕ, ಕಾಗದ ಪತ್ರಗಳು ಇದ್ದ ಕಾರಣ ಬೆಂಕಿ ಜ್ವಾಲೆ ತೀವ್ರವಾಗಿ ವ್ಯಾಪಿಸಿದೆ. ತೊಲೆ, ರಿಪೀಸುಗಳ ಸಹಿತ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಅಡುಗೆ ಅನಿಲ ಸಿಲಿಂಡರ್ ಸ್ಪೋಟ ಸಂಭವಿಸಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಡುಗೆ ಅನಿಲ ಸಿಲಿಂಡರ್ ಮಾರಾಟ ಏಜೆನ್ಸಿಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಖಚಿತ ಪಡಿಸಿದರು.

ಕಂದಾಯ ನಿರೀಕ್ಷಕ ಪುಟ್ಟಸ್ವಾಮಿ, ಗ್ರಾ.ಪಂ. ಆಡಳಿತಾಧಿಕಾರಿ ಡಾ.ಪ್ರವೀಣಕುಮಾರ್, ಅಭಿವೃದ್ಧಿ ಅಧಿಕಾರಿ ಮೃತ್ಯುಂಜಯ, ಮಾಜಿ ಅಧ್ಯಕ್ಷ ಎಂ.ಕೆ.ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.