ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಮತ್ತು ದರಸಗುಪ್ಪೆ ಗ್ರಾಮಗಳ ನಡುವೆ, ಚಾಮರಾಜನಗರ– ಬೀದರ್ ಹೆದ್ದಾರಿ ಪಕ್ಕದಲ್ಲಿದ್ದ ಐತಿಹಾಸಿಕ ಮಂಟಪ (ಮೂಲೆ ಮಂಟಪ)ವನ್ನು ರಸ್ತೆ ಅಗಲೀಕರಣ ಕಾಮಗಾರಿ ನಡೆಸುತ್ತಿರುವವರು ನೆಲಸಮ ಮಾಡಿದ್ದಾರೆ.

ಆಳರಸರ ಕಾಲದ ಪಳೆಯುಳಿಕೆಯಾಗಿದ್ದ ಮಹತ್ವದ ಈ ಮಂಟಪ ‘ಮೂಲೆ ಮಂಟಪ’ ಎಂದೇ ಪ್ರಸಿದ್ಧಿಯಾಗಿತ್ತು. ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ನಡೆಸಿದ ಮೈಸೂರು ಒಡೆಯರ್ ವಂಶದ ಆರಂಭಿಕ ದೊರೆಗಳ ಕಾಲದಲ್ಲಿ ಈ ಮಂಟಪ ನಿರ್ಮಾಣವಾಗಿತ್ತು. ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವರ

ವೈರಮುಡಿ ಉತ್ಸವದ ವೇಳೆ ಈ ಮಂಟಪವನ್ನು ಅರವಟ್ಟಿಗೆಯಾಗಿ ಬಳಸಲಾಗುತ್ತಿತ್ತು. ಪಾದಯಾಚಾರಿಗಳು ವಿಶ್ರಾಂತಿ ಪಡೆಯಲೆಂದು ಮತ್ತು ಮಜ್ಜಿಗೆ, ನೀರು, ಪಾನಕ ವಿತರಿಸುವ ಉದ್ದೇಶದಿಂದ ಒಡೆಯರ್ ಕಾಲದಲ್ಲಿ ಇಂತಹ ಅರವಟ್ಟಿಗೆಗಳು ಸಾಕಷ್ಟು ನಿರ್ಮಾಣಗೊಂಡಿದ್ದವು. ಆ ಪೈಕಿ ‘ಮೂಲೆ ಮಂಟಪ’ ಕೂಡ ಆಸಪಾಸಿನ ಹತ್ತಾರು ಊರುಗಳಲ್ಲಿ ಹೆಸರಾಗಿತ್ತು.

ಇಂತಹ ಮಹತ್ವದ ಮಂಟಪವನ್ನು ನೆಲಸಮ ಮಾಡಿರುವುದಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ಹಳೆಯ ಕಿರಂಗೂರು ಸಮೀಪ ಇದ್ದ ಮೂಲೆ ಮಂಟಪ ಐತಿಹಾಸಿಕ ಪಳೆಯುಳಿಕೆಯಾಗಿತ್ತು. ರಸ್ತೆ ಅಗಲೀಕರಣ ಮಾಡುವವರು ಈ ಮಂಟಪವನ್ನು ನೆಲಸಮ ಮಾಡಿದ್ದು, ಪಾರಂಪರಿಕ ಮತ್ತು ಐತಿಹಾಸಿಕ ಸಾಕ್ಷಿಯೊಂದನ್ನು ನಾಶ ಮಾಡಿದ್ದಾರೆ. ಅದನ್ನು ಪುನರ್ ನಿರ್ಮಾಣ ಮಾಡಬೇಕು’ ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ಕೆ. ಚಂದನ್ ಆಗ್ರಹಿಸಿದ್ದಾರೆ.

‘ಸುರಕಿ ಗಾರೆ ಮತ್ತು ಕಲ್ಲು ಚಪ್ಪಡಿಗಳನ್ನು ಬಳಸಿ ನಿರ್ಮಿಸಿದ್ದ ಅಪರೂಪದ ಶಿಲಾ ಮಂಟವನ್ನು ಕೆಡವಿದ್ದರೂ ಪ್ರಾಚ್ಯವಸ್ತು ಇಲಾಖೆ ಇತ್ತ ಗಮನ ಹರಿಸಿಲ್ಲ. ಇದು ಆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ’ ಎಂದು ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ಡಿ.ಬಿ. ರುಕ್ಮಾಂಗದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-40-91032930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.