ಶ್ರೀರಂಗಪಟ್ಟಣ: ‘ನಮ್ಮದು ವಿವಿಧ ಜಾತಿ, ಧರ್ಮಗಳಿಂದ ಕೂಡಿದ ಬಹು ಸಂಸ್ಕೃತಿಯ ಶ್ರೀಮಂತ ಸಮಾಜ. ಈ ವಿಶೇಷ ಸಾಮರಸ್ಯತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ’ ಎಂದು ಕೇಂದ್ರ ಸರ್ಕಾರದ ಜಿಎಸ್ಟಿ ಅಪೀಲು ನ್ಯಾಯಾಧಿಕರಣದ ತಾಂತ್ರಿಕ ಸಮಿತಿ ಸದಸ್ಯ ಡಿ. ಜಗನ್ನಾಥಸಾಗರ್ ಹೇಳಿದರು.

ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಉಪ್ಪಾರ ಭಗೀರಥ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ‘ವಿವಿಧ ಜಾತಿ, ಧರ್ಮಗಳ ಜನರು ತಮ್ಮದೇ ಆದ ಆಚರಣೆ ಮತ್ತು ಪರಂಪರೆಯನ್ನು ಹೊಂದಿದ್ದಾರೆ. ಈ ವಿಭಿನ್ನ ಸಂಸ್ಕೃತಿಯನ್ನು ಪರಸ್ಪರ ಗೌರವಿಸಬೇಕು. ಉಪ್ಪಾರ ಜನಾಂಗ ಇತರ ಸಮುದಾಯದ ಜತೆ ವಿಶ್ವಾಸ ಮತ್ತು ನಂಬಿಕೆಯಿಂದ ಹೆಜ್ಜೆ ಹಾಕಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶಿಕ್ಷಣವೇ ಮೂಲ ಮಂತ್ರವಾಗಬೇಕು’ ಎಂದು ಅವರು ಸಲಹೆ ನೀಡಿದರು.

‘ಭಗೀರಥ ಮಹರ್ಷಿಗಳು ಗಂಗೆಯನ್ನು ಭೂಮಿಗೆ ತಂದರು ಎಂಬುದು ಗಾಢವಾದ ನಂಬಿಕೆ. ಅವರ ತಪಸ್ಸು, ಸಂಕಲ್ಪ ಶಕ್ತಿಯಿಂದ ಅಸಾಧಾರಣವಾದದ್ದನ್ನು ಸಾಧಿಸಿದ್ದಾರೆ. ಸಾಧನೆಗೆ ಅಂತಹ ಛಲ ಪಾಲಹಳ್ಳಿಯಲ್ಲಿ ಭಗೀರಥ ಮಹರ್ಷಿ ಭವನ ನಿರ್ಮಾಣಕ್ಕೆ ವಿವಿಧ ಸಮುದಾಯದ ಜನರು ಆರ್ಥಿಕ ನೆರವು ನೀಡುತ್ತಿರುವುದು ಸಂತಸದ ಸಂಗತಿ’ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಎಸ್. ಚಂದ್ರಶೇಖರ್, ಜೆಡಿಎಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಪೈ. ಮುಕುಂದ, ಎಂಪಿಸಿಎಸ್ ಅಧ್ಯಕ್ಷ ಜಯರಾಂ, ಪಿ.ಎಸ್. ರಮೇಶಬಾಬು ಮಾತನಾಡಿದರು.

ಮುಖಂಡರಾದ ಪಿ.ಎಂ. ಶ್ರೀಧರ್, ಗೋವಿಂದರಾಜು, ಸಿದ್ದಶೆಟ್ಟಿ, ಪ್ರದೀಪ್, ಉಪ್ಪಾರರ ಯುವ ವೇದಿಕೆಯ ಕೆ.ಟಿ. ಮೋಹನಕುಮಾರ್, ಗೀತಾ, ಉಪ್ಪಾರರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಎಸ್. ಸೋಮು, ಉಪಾಧ್ಯಕ್ಷ ರಾಮಚಂದ್ರು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ಮೇಸ್ತ್ರಿ ಮಹದೇವ, ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜು, ಕೋಳಿ ಮಂಜುನಾಥ್, ನಾಗರಾಜು ಪಾಲ್ಗೊಂಡಿದ್ದರು. ವಿವಿಧ ಸಂಘಟನೆಗಳ ಮುಖಂಡರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-40-575979980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.