ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಮುತ್ತುಮಾರಮ್ಮ ದೇವಿಯ 54ನೇ ವರ್ಷದ ಕರಗ ಮಹೋತ್ಸವ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆವರೆಗೆ ಸಂಭ್ರಮದಿಂದ ನಡೆಯಿತು.

ಪಟ್ಟಣದ ಕಾವೇರಿ ನದಿ ಸ್ನಾನಘಟ್ಟದ ಬಳಿ ಮುತ್ತುಮಾರಮ್ಮ ದೇವಿಯ ಕರಗವನ್ನು ಸಿಂಗರಿಸಿ ಅಗ್ರಪೂಜೆ ಸಲ್ಲಿಸಿದ ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮುತ್ತುಮಾರಮ್ಮ ಹಾಗೂ ಮುನೇಶ್ವರ ದೇವರ ಗುಡ್ಡಪ್ಪ ಬಿ. ಕುಮಾರ್ ಸರ್ವಾಲಂಕೃತ ಕರಗವನ್ನು ಹೊತ್ತು ಸಾಗಿದರು. ನೂರಾರು ಭಕ್ತರು ಅವರ ಜತೆ ಹೆಜ್ಜೆ ಹಾಕಿದರು. ಪಟ್ಟಣದ ಮಿನಿ ವಿಧಾನಸೌಧದ ರಸ್ತೆ, ರಾಜ ಬೀದಿ, ಕಾಳಮ್ಮನ ಗುಡಿ ಬೀದಿ, ರಂಗನಾಥನಗರ ಬಡಾವಣೆ ಮಾರ್ಗವಾಗಿ ಮತ್ತುಮಾರಮ್ಮ ದೇವಿಯ ಕರಗ ಸಾಗಿತು. ಕರಗಕ್ಕೆ ಭಕ್ತರು ದಾರಿಯುದ್ದಕ್ಕೂ ಪುಷ್ಪಾರ್ಚನೆ ಮಾಡಿದರು. ಮಾರ್ಗದ ಉದ್ದಕ್ಕೂ ಈಡುಗಾಯಿ ಸೇವೆ ಮತ್ತು ಕರ್ಪೂರದ ಸೇವೆಗಳು ನಡೆದವು.

ಪಟದ ಕುಣಿತ, ಬೆದರು ಬೊಂಬೆ, ಚರ್ಮ ವಾದ್ಯ ಕಲಾವಿದರು ಉತ್ಸವಕ್ಕೆ ಮೆರಗು ತಂದರು. ಯುವಕರು ತಮಟೆಯ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮುಂಜಾನೆ 6.30ರ ವೇಳೆಗೆ ಕರಗ ದೇವಾಲಯ ತಲುಪಿತು. ದೇವಾಲಯದ ಆವರಣದಲ್ಲಿರುವ ಮುನೇಶ್ವರ ದೇವರ ಸನ್ನಿಧಾನ ಮತ್ತು ದೇವಾಲಯದ ಸಂಸ್ಥಾಪಕ ದಿವಂಗತ ಕೆ. ಬಾಬು ಅವರ ಸಮಾಧಿ ಬಳಿ ಕರಗಕ್ಕೆ ಪೂಜೆ, ಪುನಸ್ಕಾರಗಳು ಜರುಗಿದವು. ಕೊಂಡ ಹಾಯುವಾಗ ಕರಗ ಹೊತ್ತಿದ್ದ ದೇವಾಲಯದ ಗುಡ್ಡಪ್ಪ ಬಿ. ಕುಮಾರ್ ಆಯತಪ್ಪಿ ಬಿದ್ದು ಗಾಯಗೊಂಡರು. ರಕ್ಷಿಸಲು ಮುಂದಾದ ಅವರ ಸಹೋದರಿ ರಾಜೇಶ್ವರಿ ಕೂಡ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಕರಗ ಮಹೋತ್ಸವದ ನಿಮಿತ್ತ ಮುತ್ತುಮಾರಮ್ಮ ದೇವಿಯ ಮೂಲ ದೇವರ ಮೂರ್ತಿಯನ್ನು ಬಗೆ ಬಗೆಯ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಕ್ಷೀರಾಭಿಷೇಕ, ಅರ್ಚನೆಗಳು ನಡೆದವು. ಹರಕೆ ಹೊತ್ತ ಮಹಿಳೆಯರು ಬಾಯಿ ಬೀಗದ ಹರಕೆ ತೀರಿಸಿದರು. ಕೊಂಡೋತ್ಸವದ ಬಳಿಕ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಸ್ಥಳೀಯರು ಮಾತ್ರವಲ್ಲದೆ ಬೆಂಗಳೂರು, ಕೋಲಾರ, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ ಇತರ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-40-849582411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.