ಶ್ರೀರಂಗಪಟ್ಟಣ: ತಾಲ್ಲೂಕಿನ ಮರಳಾಗಾಲ ಗ್ರಾಮದ ಬಳಿ ಮಾ.6ರಂದು ರಾತ್ರಿ ನಡೆದಿದ್ದ ಅರ್ಚಕ ಸಿದ್ದಲಿಂಗಪ್ಪ ಅವರ ಕೊಲೆಗೆ ಆತನ ಪತ್ನಿಯೇ ಸಂಚು ರೂಪಿಸಿದ್ದ ಪ್ರಕರಣ ವಿಚಾಣೆಯಿಂದ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮರಳಾಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ, ಆಕೆಯ ಪ್ರಿಯಕರ ಮರಳಾಗಾಲ ಗ್ರಾಮದ ಹರೀಶ್ ಎಂ.ಸಿ., ಆತನ ಸ್ನೇಹಿತರಾದ ಅದೇ ಗ್ರಾಮದ ಸಂತೋಷ್ ಕುಮಾರ್ ಎಂ.ಆರ್ ಮತ್ತು ಗಣೇಶ್ ಬಿ.ಆರ್. ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಅದೇ ಗ್ರಾಮದ ಅವಿವಾಹಿತ ಹರೀಶ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ಸಿದ್ದಲಿಂಗಪ್ಪ ಅವರಿಗೆ ತಿಳಿದ ಬಳಿಕ ಸಿದ್ದಲಿಂಗಪ್ಪ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಶಾಲಿನಿ ತನ್ನ ಪತಿಯನ್ನು ಹತ್ಯೆ ಮಾಡುವಂತೆ ತನ್ನ ಪ್ರಿಯಕರಿಗೆ ಹೇಳಿದ್ದಳು.

ಹರೀಶ್ ತನ್ನ ಸ್ನೇಹಿತರಾದ ಸಂತೋಷಕುಮಾರ್ ಎಂ.ಆರ್ ಮತ್ತು ಗಣೇಶ್ ಬಿ.ಆರ್ ಎಂಬವರ ಜತೆಗೂಡಿ ಮಾ.6ರಂದು ರಾತ್ರಿ ಸಿದ್ದಲಿಂಗಪ್ಪ ಅವರಿಗೆ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು. ಸಿದ್ದಲಿಂಗಪ್ಪ ಅವರ ಮೃತದೇಹ ಮತ್ತು ಅವರ ಬೈಕ್ ಅನ್ನು ಪಕ್ಕದ ಸಿಡಿಎಸ್ ನಾಲೆ ಎಸೆದು ಅಪಘಾತ ನಡೆದಿದೆ ಎಂದು ಬಿಂಬಿಸುವ ಯತ್ನ ನಡೆಸಿದ್ದರು. ಆರೋಪಿಗಳು ಸಿದ್ದಲಿಂಗಪ್ಪ ಅವರ ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಮುಖ್ಯ ಆರೋಪಿ ಹರೀಶನನ್ನು ಸೋಮವಾರ ಬಂಧಿಸಿದ್ದ ಪೊಲೀಸರು ಆತ ನೀಡಿದ ಮಾಹಿತಿ ಆಧರಿಸಿ ಇತರ ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.

ಎಸ್ಪಿ ಶೋಭಾರಾಣಿ ವಿ.ಜೆ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಸಿ.ಇ. ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ ಮತ್ತು ಡಿವೈಎಸ್ಪಿ ಯು.ಡಿ. ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.