ಶ್ರೀರಂಗಪಟ್ಟಣ: ‘ದೀರ್ಘ ಕಾಲ ಬದುಕುವುದಕ್ಕಿಂತ ಶ್ರೇಷ್ಠ ಮತ್ತು ಸ್ವಾಭಿಮಾನದ ಬದುಕು ಮುಖ್ಯ’ ಎಂದು ವಸತಿ ಇಲಾಖೆ ಉಪ ಕಾರ್ಯದರ್ಶಿ ಸಿ. ಶಿವಣ್ಣ ಹೇಳಿದರು.

ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಲ್ಲಿ ಸ್ಥಳೀಯ ಅಂಬೇಡ್ಕರ್ ಸಂಘ ಭಾನುವಾರ ಸಂಜೆ ಏರ್ಪಡಿಸಿದ್ದ ಅಂಬೇಡ್ಕರ್ ಅವರ 135ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಎಲ್ಲ ಮಾನವರೂ ಘನತೆಯಿಂದ ಜೀವಿಸಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಶೋಷಿತರಿಗೆ ಸಂವಿಧಾನದಲ್ಲಿ ಹಲವಾರು ಹಕ್ಕುಗಳನ್ನು ಕಲ್ಪಿಸಿದ್ದಾರೆ. ಹಕ್ಕುಗಳನ್ನು ಅರ್ಥೈಸಿಕೊಂಡು ಅನುಭವಿಸಬೇಕು. ಸಿಗುವ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದು ಸಲಹೆ ನೀಡಿದರು.

ಹಿರಿಯ ವೈದ್ಯ ಹಾಗೂ ಗಾಂಧಿವಾದಿ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕನಲ್ಲ. ಎಲ್ಲ ಶೋಷಿತ ಸಮುದಾಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು ಎಂಬ ಆಶಯ ಹೊಂದಿದ್ದರು. ಅದಕ್ಕೆ ಪೂರವಾದ ಅಂಶಗಳು ಸಂವಿಧಾನದಲ್ಲಿ ಅಡಕವಾಗಿವೆ’ ಎಂದರು.

ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ ಮಾತನಾಡಿ, ‘ಅಂಬೇಡ್ಕರ್ ಅವರ ಬದುಕಿನ ಪ್ರತಿ ಪುಟವೂ ಸ್ಫೂರ್ತಿದಾಯಕವಾದುದು. ಅವರ ಆಶಯದಂತೆ ನಡೆಯುವ ಸಂಕಲ್ಪ ಮಾಡಬೇಕು. ಜಾತಿ, ಧರ್ಮ, ವರ್ಗ, ವರ್ಣಗಳನ್ನು ಮೀರಿ ವಿಶ್ವಮಾನವತ್ವದೆಡೆಗೆ ಹೆಜ್ಜೆ ಹಾಕಬೇಕು’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಪ್ರೊ. ನಾಗರಾಜ್, ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು, ನಿವೃತ್ತ ಪ್ರಾಧ್ಯಾಪಕಿ ಪ್ರೊ. ಮಂಗಳಗೌರಮ್ಮ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂಬೇಡ್ಕರ್ ಸಂಘದ ಪದಾಧಿಕಾರಿಗಳಾದ ಡಿ.ಪಿ. ಪ್ರವೀಣ್, ಡಿ.ಸಿ. ಪ್ರಸನ್ನ, ದಿವಾಕರ್, ಅಭಿಷೇಕ್, ರಾಜೇಶ್, ಬಸವರಾಜು, ಮರಿಲಿಂಗು, ರಾಕೇಶ್, ಸತೀಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-40-1833403702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.