ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನ್ ಬ್ರಿಟಿಷರ ಜತೆ ಹೋರಾಟ ನಡೆಸಿದ ಈ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಎಂದು ಸಾಹಿತಿ ಹಾಗೂ ಇತಿಹಾಸ ಸಂಶೋಧಕ ಕಲೀಂ ಉಲ್ಲಾ ಬಣ್ಣಿಸಿದರು.

ಪಟ್ಟಣದಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟ ಮತ್ತು ಪ್ರಜ್ಞಾವಂತರ ವೇದಿಕೆ ಸೋಮವಾರ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಟಿಪ್ಪು ಈ ನಾಡಿನ ರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ. ಬ್ರಿಟಿಷರ ಜತೆ ರಾಜಿ ಮಾಡಿಕೊಳ್ಳದೆ ಕಡೇ ಕ್ಷಣದವರೆಗೂ ದೇಶಕ್ಕಾಗಿ ಹೋರಾಟ ಮಾಡಿ ಯುದ್ಧಭೂಮಿಯಲ್ಲಿ ಪ್ರಾಣಾರ್ಪಣೆ ಮಾಡಿದ ಧೀರ. ತನ್ನ ರಾಜ್ಯದಲ್ಲಿ ಮದ್ಯ ಮತ್ತು ಜೂಜು ನಿಷೇಧ ಮಾಡಿದ್ದ. ಶೃಂಗೇರಿ ಮಠವನ್ನು ಮರಾಠರ ದಾಳಿಯಿಂದ ರಕ್ಷಣೆ ಮಾಡಿದೆ. ದಲಿತರಿಗೆ ಭೂಮಿ ಹಂಚಿಕೆ, ರೈತರಿಗೆ ತಕ್ಕಾವಿ ಸಾಲ, ರೇಷ್ಮೆ ಪರಿಚಯ, ಕೆರೆ ಕಟ್ಟೆಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದ. ಅಂತಹ ಜನಪರ ರಾಜನ ಬಗ್ಗೆ ಪೂರ್ವಾಗ್ರಹ ಸಲ್ಲದು’ ಎಂದರು.

ಹಿರಿಯ ವೈದ್ಯ ಹಾಗೂ ಗಾಂಧಿವಾದಿ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ಟಿಪ್ಪು ಸುಲ್ತಾನ್ ಪರ ಧರ್ಮ ಸಹಿಷ್ಣುವಾಗಿದ್ದ. ಆತನ ಆಸ್ಥಾನದಲ್ಲಿ 7 ಮಂದಿ ಹಿಂದೂ ಧರ್ಮಕ್ಕೆ ಸೇರಿದ್ದ ಮಂತ್ರಿಗಳಿದ್ದರು. ಯುದ್ಧಭೂಮಿಯಲ್ಲಿ ವಿಶ್ವದಲ್ಲೇ ಪ್ರಥಮ ಬಾರಿಗೆ ರಾಕೆಟ್ ಉಡಾಯಿಸಿದ್ದು ಟಿಪ್ಪು’ ಎಂದು ಹೇಳಿದರು.

ಮುಸ್ಲಿಂ ಸೌಹಾರ್ದ ಒಕ್ಕೂಟದ ಗೌರವಾಧ್ಯಕ್ಷ ಇಲ್ಯಾಸ್ ಅಹಮದ್ಖಾನ್, ಅಧ್ಯಕ್ಷ ಅಪ್ಸರ್ ಖಾನ್ ಮಾತನಾಡಿದರು. ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ಸಕ್ಕೂರ್, ಉಪಾಧ್ಯಕ್ಷ ಉಮರ್ ಅಹಮದ್, ಖಜಾಂಚಿ ಅಯೂಬ್, ನಿರ್ದೇಶಕರಾದ ಅರ್ಬಾಜ್ ಖಾನ್, ಸಿಂಧುವಳ್ಳಿ ಅಕ್ಬರ್, ಆಫ್ತಾಬ್, ಎಜಾಸ್ ಪಾಷ, ಸಾಧಿಕ್ ಪಾಷ, ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್, ಮೈಸೂರಿನ ನೂರ್ ಮಹಮದ್ ಮರ್ಚೆಂಟ್, ಬಿ.ಟಿ. ದಾಸ್ಪ್ರಕಾಶ್, ಚಿಕ್ಕತಮ್ಮೇಗೌಡ, ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್.ಎಲ್. ಯಮುನಾ, ಕ್ಯಾತನಹಳ್ಳಿ ಚಂದ್ರಣ್ಣ ಪಾಲ್ಗೊಂಡಿದ್ದರು.

ರಕ್ತದಾನ: ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್, ಉಮರ್ ಅಹಮದ್, ಅಯೂಬ್ ಷರೀಫ್, ಬಾಬು ರಕ್ತದಾನ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-40-598491961

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.