ಶನಿವಾರ, ನವೆಂಬರ್ 16, 2019
21 °C

ಈಜಲು ಹೋಗಿದ್ದ ವಿದ್ಯಾರ್ಥಿಗಳ ಸಾವು

Published:
Updated:
Prajavani

ಹಲಗೂರು: ಸಮೀಪದ ತೊರೆಕಾಡನಹಳ್ಳಿ ಗ್ರಾಮದ ಬಾವಿಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಬುಧವಾರ ಮೃತಪಟ್ಟಿದ್ದಾರೆ.

ಗೊಲ್ಲರಹಳ್ಳಿ ಗ್ರಾಮದ ಮಹದೇವ ಅವರ ಮಗ ಯಶವಂತ್ (15), ನಂಜೇಗೌಡ ಅವರ ಮಗ ಸಂತೋಷ್ (14) ಮೃತಪಟ್ಟ ವಿದ್ಯಾರ್ಥಿಗಳು.

ಶಾಲೆಗೆ ರಜೆ ಇದ್ದಿದ್ದರಿಂದ ಇಬ್ಬರೂ ಸೈಕಲ್‌ನಲ್ಲಿ ಗೊಲ್ಲರಹಳ್ಳಿಯಿಂದ ತೊರೆಕಾಡನಹಳ್ಳಿ ಗ್ರಾಮದ ಪ್ರಕಾಶ್ ಅವರ ಬಾವಿಯಲ್ಲಿ ಈಜಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಯಶವಂತ್ ಹಲಗೂರಿನಲ್ಲಿ 9ನೇ ತರಗತಿ, ಸಂತೋಷ್ 8ನೇ ತರಗತಿಯಲ್ಲಿ ಓದುತ್ತಿದ್ದರು. ಸ್ಥಳಕ್ಕೆ ಸಿಪಿಐ ಮಂಜುನಾಥ್, ಸಬ್ ಇನ್‌ಸ್ಪೆಕ್ಟರ್ ಚೌಡೇಗೌಡ ಭೇಟಿ ನೀಡಿ ಪರಿಶೀಲಿಸಿದರು.

ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)