ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಿಕೆಯಲ್ಲೇ ಕುಸಿದುಬಿದ್ದ ‘ರಾವಣ’

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ತಿರುವನಂತಪುರ: ಜನಪ್ರಿಯ ಕಥಕ್ಕಳಿ ಕಲಾವಿದ ಮಡವೂರ್‌ ವಾಸುದೇವನ್ ನಾಯರ್ (88) ವೇದಿಕೆ ಮೇಲೆ ನೃತ್ಯ ಪ್ರದರ್ಶಿಸುತ್ತಿರುವಾಗಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಕೊಲ್ಲಂ ಜಿಲ್ಲೆಯ ಅಂಚಲ್‌ನಲ್ಲಿರುವ ಅಗಸ್ಥ್ಯಕೋಡೆ ಮಹಾದೇವ ದೇವಸ್ಥಾನದಲ್ಲಿ ಅವರು ಮಂಗಳವಾರ ರಾತ್ರಿ ನೃತ್ಯ ಪ್ರದರ್ಶಿಸುತ್ತಿದ್ದರು. ‘ರಾವಣವಿಜಯಂ’ ಕಥಾನಕದಲ್ಲಿ ರಾವಣನ ಪಾತ್ರಧಾರಿಯಾಗಿದ್ದರು. ದುರ್ಯೋಧನ, ರಾವಣ ಮತ್ತು ಕಂಸನ ಪಾತ್ರಗಳಿಗೆ ವಾಸುದೇವನ್ ಹೆಸರಾಗಿದ್ದರು. 1929ರಲ್ಲಿ ತಿರುವನಂತಪುರದಲ್ಲಿ ಜನಿಸಿದ ನಾಯರ್, 13ನೇ ವಯಸ್ಸಿನಲ್ಲಿ ಕಥಕ್ಕಳಿ ಕಲಿಯಲು ಆರಂಭಿಸಿದರು. ಒಂಬತ್ತು ವರ್ಷಗಳ ಕಾಲ ಕಲಾಮಂಡಲಮ್ ನೃತ್ಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಿರುವನಂತಪುರದಲ್ಲಿರುವ ಕಲಾಭಾರತಿ ಪ್ರದರ್ಶನ ಕಲೆಗಳ ತರಬೇತಿ ಸಂಸ್ಥೆಯ ಪ್ರಾಂಶುಪಾಲರೂ ಆಗಿದ್ದರು.

1997ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ‍ಪಾತ್ರರಾಗಿದ್ದರು. 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಗೌರವ ಸಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT