ಶ್ರೀರಂಗಪಟ್ಟಣ: ‘ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಇಡೀ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿದ್ದು ಅಂತಹ ಪ್ರಕರಣಗಳಿಗೆ ಮಹಿಳೆಯರು ಒಕ್ಕೊರಲಿನಿಂದ ವಿರೋಧಿಸಬೇಕು’ ಎಂದು ರಂಗಕರ್ಮಿ ಸುಜಾತ ಅಕ್ಕಿ ಹೇಳಿದರು.

ಪಟ್ಟಣದಲ್ಲಿ ಸಂಜಯ ಪ್ರಕಾಶನ ಭಾನುವಾರ ಸಂಜೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮಹಿಳೆಯರ ಸಹಕಾರ ಇಲ್ಲದೆ ಹೆಣ್ಣು ಭ್ರೂಣಹತ್ಯೆಯಂತಹ ಪೈಶಾಚಿಕ ಪ್ರಕರಣಗಳು ನಡೆಯಲು ಸಾಧ್ಯವಿಲ್ಲ. ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಜೀವ ತೆಗೆಯಲು ನೆರವಾಗುವುದು ದೊಡ್ಡ ದುರಂತ. ತಾಯಂದಿರುವ ಹೆಣ್ಣು ಮಕ್ಕಳನ್ನೇ ಗಂಡು ಮಕ್ಕಳಿಗೆ ಸರಿ ಸಮನಾಗಿ ಬೆಳೆಸಿ ಶಿಕ್ಷಣ ನೀಡಬೇಕು. ಸಾಮಾಜಿಕ ಸಮತೋಲನಕ್ಕೆ ಕೈಜೋಡಿಸಬೇಕು. ಲಿಂಗ ತಾರತಮ್ಯವನ್ನು ಖಂಡಿಸಬೇಕು’ ಎಂದರು.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ಆಧುನಿಕತೆ ಹೆಚ್ಚಿದಂತೆ ಮಹಿಳೆಯರ ಸಮಸ್ಯೆಗಳು ಬೇರೆ ಸ್ವರೂಪ ಪಡೆಯುತ್ತಿವೆ. ಸಾಮಾಜಿಕ ಜಾಲತಾಣಗಳು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಕೂಡ ತಾರತಮ್ಯ ನಡೆಯುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಮಹಿಳೆಯರು ಜಾಗೃತರಾಗಬೇಕು’ ಎಂದು ಹೇಳಿದರು.

ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ಉಪನ್ಯಾಸಕ ಧನಂಜಯ ಬ್ಯಾಡರಹಳ್ಳಿ, ಕೆ.ಎಸ್. ಜಯಶಂಕರ್, ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ ಪದ್ಮನಾಭ, ಎನ್. ಸರಸ್ವತಿ, ಹಿರಿಯ ವಕೀಲ ಸಿ. ಪುಟ್ಟಸ್ವಾಮಿ, ಚಿಕ್ಕತಿಮ್ಮೇಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.