ಬುಧವಾರ, ಮಾರ್ಚ್ 29, 2023
27 °C
ಗೊರವನಹಳ್ಳಿ: ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿದ ಕೆ.ಸಿ.ನಾರಾಯಣಗೌಡ

ಗೊರವನಹಳ್ಳಿ: ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ತಾಲ್ಲೂಕಿನ ಗೊರವನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸ್ವಚ್ಛ ಸಂಕೀರ್ಣ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಉದ್ಘಾಟಿಸಿದರು.

ಸ್ಥಳೀಯ ಗೊರವನಹಳ್ಳಿ ಗ್ರಾ.ಪಂ, ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಮದ್ದೂರು ತಾಲ್ಲೂಕಿನ 32 ಗ್ರಾ.ಪಂ ಗಳ ವ್ಯಾಪ್ತಿಗಳಲ್ಲಿ ಸುಮಾರು ₹ 7.60 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಿಸಲಾಗುತ್ತಿದೆ. ಅವುಗಳಿಗೆ ಗೊರವನಹಳ್ಳಿ ಗ್ರಾ.ಪಂ.ನಿಂದ ಚಾಲನೆ ದೊರಕಿರುವುದು ಸಂತಸದ ವಿಷಯ ಎಂದರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಒಕ್ಕೂಟಕ್ಕೆ ನಿರ್ವಹಣೆಯ ಜವಾಬ್ದಾರಿ ನೀಡಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯಲ್ಲಿ ಇದು ಪ್ರಥಮ ಪ್ರಯೋಗವಾಗಿದೆ ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತ ಕನಸಿಗೆ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ್ದಾರೆ. ವಿವಿಧ ಇಲಾಖೆ ಸಹಯೋಗದೊಂದಿಗೆ ದೇಶದ ಸ್ವಚ್ಛತೆಗೆ ಹೆಚ್ಚಿನ ಅನುದಾನ ನೀಡಿ ಪರಿಸರ ಕಾಪಾಡಲಾಗುತ್ತಿದೆ. ಘನತಾಜ್ಯ ನಿರ್ವಹಣೆಯಿಂದ ಎರೆಹುಳು ಗೊಬ್ಬರ ಹಾಗೂ ಪ್ಯಾಸ್ಟಿಕ್ ಮರುಬಳಕೆಯಿಂದ ಹೆಚ್ಚು ಆದಾಯ ಬರುತ್ತದೆ. ಕಸವಿಂಗಡನೆ ಕೆಲಸಕ್ಕೆ ಮಹಿಳೆಯರನ್ನು ಬಳಸಿಕೊಂಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಪರಿಸರ ರಕ್ಷಣೆಯಾಗುತ್ತದೆ ಎಂದರು.

ಹಾನಗಲ್, ಸಿಂದಗಿ ಕ್ಷೇತ್ರದ ಸೋಲು ಗೆಲುವು ಬಗ್ಗೆ ಕೇಳಿದ ಪ್ರಶ್ನೆಗೆ ಅಲ್ಪ ಪ್ರಮಾಣದ ಅಂತರದಿಂದ ಸೋಲು ಅನುಭವಿಸಿದ್ದೇವೆ. ಮುಂದಿನ ದಿನಗಳಲ್ಲಿ ಮುಖಂಡರೊಂದಿಗೆ ಪರಾಮರ್ಶೆ ಮಾಡಲಾಗುವುದು. ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮಂಡ್ಯ ನಗರಸಭೆ ಅಧ್ಯಕ್ಷ ಮಂಜು, ಗ್ರಾ.ಪಂ.ಅಧ್ಯಕ್ಷ ಮಧುಕುಮಾರ್, ಉಪಾಧ್ಯಕ್ಷೆ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಂಗೇಗೌಡ, ತಾ.ಪಂ.ಇಒ ಮುನಿರಾಜು, ಸಹಾಯಕ ನಿರ್ದೇಶಕಿ ನಾಗಲಕ್ಷ್ಮಿ, ಟಿಎಪಿ‌ಸಿಎಂಎಸ್ ಉಪಾಧ್ಯಕ್ಷ ರಾಘವ್, ಪಿಡಿಒ ಮಧುಸೂದನ್,
ಗ್ರಾ.ಪಂ.ಸದಸ್ಯರಾದ ಅನುಪಮಾ, ವಸಂತ, ರಾಮಲಿಂಗಯ್ಯ, ಶಂಕರೇಗೌಡ, ರಮೇಶ್, ಚಂದು, ಉಮೇಶ್, ಶೋಭಾ, ನಾಗವೇಣಿ, ಜಿ.ಪಂ.ಮಾಜಿ ಸದಸ್ಯ ಮರಿಹೆಗ್ಗಡೆ, ಬೊರಯ್ಯ, ತಾ.ಪಂ ಸದಸ್ಯ ಚಿಕ್ಕ ಮರಿಯಪ್ಪ, ಮಹದೇವಮ್ಮ, ಮುಖಂಡರಾದ ಎನ್.ಆರ್.ಪ್ರಕಾಶ್, ಮನು ಕುಮಾರ್, ಹನುಮಂತೇಗೌಡ, ಕಿಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.