ನಾಗಮಂಗಲ: ‘ನಮ್ಮ ದೇಶದ ಆಸ್ತಿ ಎಂದರೆ ಅದು ನಮ್ಮ ಸಂಸ್ಕೃತಿ. ಇಡೀ ಪ್ರಪಂಚ ಭಾರತದ ಕಡೆಗೆ ನೋಡುತ್ತಿರುವುದು ನಮ್ಮಲ್ಲಿರುವ ಧರ್ಮ, ನ್ಯಾಯ, ಬದ್ಧತೆ ಮತ್ತು ಸಂಸ್ಕೃತಿಗಳಿಂದಾಗಿದೆ. ಈ ಸಂಸ್ಕೃತಿಯಿಂದ ಎಲ್ಲರೂ ನಮ್ಮತ್ತ ಆಕರ್ಷಿತರಾಗುತ್ತಿದ್ದಾರೆ’ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಂಗಣದಲ್ಲಿ ಕಾಲಭೈರವಾಷ್ಟಮಿಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂಗೀತೋತ್ಸವ ಮತ್ತು ಭಜನಾ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ದೇಶ ನಮ್ಮದೇ ಆದ ಇತಿಹಾಸವನ್ನು ಹೊಂದಿದ್ದು, ರಾಮಾಯಣ, ಮಹಾಭಾರತ, ಗಂಗಾಜಲ ಸೇರಿದಂತೆ ಸಾವಿರಾರು ಅಂಶಗಳನ್ನು ನೋಡಬಹುದಾಗಿದೆ. ಅಲ್ಲದೇ ಒಂದು ಬಿದಿರಿಗೆ ನಾನು ಕೊಳಲಾಗಿ, ನಾದವಾಗಿ, ಸಂಗೀತವಾಗಿ ಜನರ ಮನಮುಟ್ಟುತ್ತೇನೆ ಎಂದು ತಿಳಿದಿರುವುದಿಲ್ಲ. ಸಂತೋಷವೆಂಬುದು ಮಾತ್ರವೇ ಪ್ರತಿಯೊಬ್ಬರ ಆಸ್ತಿಯಾಗಿದೆ. ಆದ್ದರಿಂದ ಮನುಷ್ಯನಲ್ಲಿರುವ ಪ್ರತಿಭೆಯು ಯಾರ ಆಸ್ತಿಯೂ ಅಲ್ಲ, ಯಾವ ಧರ್ಮದ,ಜಾತಿಯ ಸ್ವತ್ತೂ ಅಲ್ಲ. ಅದು ನಿಮ್ಮ ಪ್ರಯತ್ನದಿಂದ ಬರುವ ದೊಡ್ಡ ಶಕ್ತಿಯಾಗಿದೆ’ ಎಂದು ತಿಳಿಸಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ವೀಣೆ ನುಡಿಸುವ ಮೂಲಕ ಚಾಲನೆ ನೀಡಿದರು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಯನ್ನು ನುಡಿದರು.

ಅಲ್ಲದೇ ಭಾನುವಾರ ಸಂಜೆಯ ವೇಳೆಗೆ ರಾಜ್ಯದ ವಿವಿಧ ಭಾಗಗಳಿಂದ ಭೈರವ ಮಾಲಾಧಾರಿಗಳು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಗಿರಿಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭೈರವಾಷ್ಟಮಿಯಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರವಣಬೆಳಗೋಳ ಶಾಸಕ ಬಾಲಕೃಷ್ಣ, ರಾಜ್ಯ ಮತ್ತು ಅಂತರರಾಜ್ಯದಿಂದ ಆಗಮಿಸಿದ್ದ ನೂರಾರು ಸಂಗೀತ ವಿದ್ವಾಂಸರು, ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಮತ್ತು ಭಕ್ತರು ಇದ್ದರು.

ಪಾದಯಾತ್ರೆ: ‘ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪಾದಯಾತ್ರೆಯ ಯಶಸ್ಸಿಗಾಗಿ ಕ್ಷೇತ್ರಕ್ಕೆ ಆಗಮಿಸಿ ಭೈರವ ಸ್ವಾಮಿಯ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಉದ್ಘಾಟನೆಯಲ್ಲಿ ಶ್ರೀಗಳಿಗೆ ಆಹ್ವಾನ ನೀಡಿದ್ದೇನೆ. ಜೊತೆಗೆ ಎಲ್ಲಾ ಧರ್ಮದ ಪೀಠಗಳ ಮುಖಂಡರು ಮತ್ತು ಎಲ್ಲಾ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಲಿದ್ದೇವೆ‘ ಡಿ.ಕೆ.ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.