ಜೇಬಿಗೆ ಕತ್ತರಿ: ಸಿಕ್ಕಿಬಿದ್ದ ಸಹೋದರರು

7

ಜೇಬಿಗೆ ಕತ್ತರಿ: ಸಿಕ್ಕಿಬಿದ್ದ ಸಹೋದರರು

Published:
Updated:
ಕೆ.ಆರ್.ಪೇಟೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಜೇಬುಗಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು

ಕೆ.ಆರ್.ಪೇಟೆ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಇಬ್ಬರು ಯುವಕರನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಉದಯಗಿರಿಯ ಶಾರೂಕ್ ಖಾನ್ (28) ಮತ್ತು ಸೌದ್ ಖಾನ್ (32) ಬಂಧಿತರು. ಪೊಲೀಸರು ಇವರಿಂದ ₹ 48 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಐಕನಹಳ್ಳಿಯ ರೈತ ಅಣ್ಣೇಗೌಡರು ಮಗಳ ಮದುವೆಗೆ ಸಾಮಾನುಗಳನ್ನು ಖರೀದಿಸಲೆಂದು ಮೈಸೂರಿಗೆ ಹೋಗಲು ಬಸ್ ಹತ್ತಿದ್ದರು. ಪ್ರಯಾಣಿಕರ ಸೋಗಿನಲ್ಲಿದ್ದ ಸಹೋದರರು ಚಾಕಚಕ್ಯತೆಯಿಂದ ಇವರ ಬಳಿಯಿದ್ದ ₹ 48 ಸಾವಿರ ಹಣ ಎಗರಿಸಿದರು. ಬಸ್ ಹೊರಡುವಾಗ ಹಣ ಕಳುವಾಗಿದ್ದು ಅರಿವಾದ ಅಣ್ಣೇಗೌಡರು ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಯಾಣಿಕರನ್ನು ಶೋಧನೆಗೆ ಒಳಪಡಿಸಿದಾಗ ಕಳ್ಳರು ಸಿಕ್ಕಿಬಿದ್ದರು.

ಡಿವೈಎಸ್‌ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟೇಶಯ್ಯ, ಸಬ್ ಇನ್‌ಸ್ಪೆಕ್ಟರ್ ಎಚ್.ಎಸ್. ವೆಂಕಟೇಶ್, ಗಿರೀಶ್, ಸತೀಶ್ ನೇತೃತ್ವದಲ್ಲಿ ಸಿಬ್ಬಂದಿ ರಾಮಲಿಂಗಯ್ಯ, ಸೋಮಶೇಖರ್, ಎಂ.ಟಿ.ರಘು, ಎಸ್.ಟಿ.ಕುಮಾರ್ ಕಾರ್ಯಾಚರಣೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !