ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ, ಈರುಳ್ಳಿ ಬೆಲೆ ಇಳಿಕೆ

ಗ್ರಾಹಕರ ಮೊಗದಲ್ಲಿ ಮಂದಹಾಸ; ರೈತರಿಗೆ ಸಿಗದ ಲಾಭ
Last Updated 6 ಏಪ್ರಿಲ್ 2021, 14:02 IST
ಅಕ್ಷರ ಗಾತ್ರ

ಮಂಡ್ಯ: ಮಾರುಕಟ್ಟೆಯಲ್ಲಿ ಈರುಳ್ಳಿ, ಟೊಮೆಟೊ ಬೆಲೆ ಇಳಿಕೆಯಾಗಿದ್ದು, ಗ್ರಾಹಕದ ಮೊಗದಲ್ಲಿ ಮಂದಹಾಸ ಮೂಡಿದೆ. ಮಾಗಿದ ಟೊಮೆಟೊ ₹10ಕ್ಕೆ ಎರಡು ಕೆ.ಜಿ., ಉತ್ತಮ ಗುಣಮಟ್ಟದ ಟೊಮೆಟೊ ಕೆ.ಜಿ.ಗೆ ₹8ರಿಂದ 10ರಂತೆ ಹಾಗೂ ₹100ಕ್ಕೆ 6–7 ಕೆ.ಜಿ. ಈರುಳ್ಳಿ ಮಾರಲಾಗುತ್ತಿದೆ.

ತಾಲ್ಲೂಕಿನ ವಿವಿಧೆಡೆಗಳಿಂದ ಮಾರುಕಟ್ಟೆಗೆ ಟೊಮೆಟೊ ಆವಕ ಹೆಚ್ಚಾಗುತ್ತಿದ್ದು, ಅದೇ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. ಟೊಮೆಟೊ ಮಾರಾಟವಾಗದೇ ಉಳಿಯುತ್ತಿದ್ದು, ಬೇರೆ ದಾರಿ ಇಲ್ಲದೆ ನಷ್ಟವಾಗುವುದನ್ನು ತಪ್ಪಿಸಲು 10ಕ್ಕೆ 2 ಕೆ.ಜಿ ಮಾರಾಟ ಮಾಡುತ್ತಿದ್ದಾರೆ.

ಒಂದು ಕ್ರೇಟ್‌ ಟೊಮೆಟೊ ಬೆಲೆ ₹100 ಇದ್ದು, ಅದರಲ್ಲಿ 22 ಕೆ.ಜಿ ಇರುತ್ತದೆ. ರೈತರು ಮಾರುಕಟ್ಟೆಗೆ ತಂದು ಹಾಕುವಷ್ಟರಲ್ಲೇ ₹70 ಖರ್ಚಾಗುತ್ತದೆ. ಆವಕ ಹೆಚ್ಚಾದ್ದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರೈತರಿಂದ ಖರೀದಿಸಿದ ಎಲ್ಲಾ ಟೊಮೆಟೊ ಮಾರಾಟ ವಾಗದೆ ಉಳಿಯುತ್ತಿದ್ದು, ನಷ್ಟದಲ್ಲೇ ಕಡಿಮೆ ಬೆಲೆಗೆ ಮಾರಲಾಗುತ್ತಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

‘ಒಂದೆಡೆ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದರೆ, ರೈತರಿಗೆ ಬೆಳೆದ ಬೆಳೆಗೆ ಸರಿಯಾದ ಲಾಭ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಬೆಳೆದ ಹಣ್ಣು ಹಾಳಾಗುವ ಬದಲು ಬಡವರಾದರೂ ಕೊಂಡು ತಿನ್ನಲಿ ಎನ್ನುವ ಕಾರಣಕ್ಕೆ ಮಾರುಕಟ್ಟೆಗೆ ತಂದು ಮಾರುತ್ತಿದ್ದೇನೆ’ ಎಂದು ರೈತರೊಬ್ಬರು ತಿಳಿಸಿದರು.

ಸಣ್ಣ ಈರುಳ್ಳಿ ₹100ಕ್ಕೆ 8 ಕೆ.ಜಿ., ಮಧ್ಯಮ ಗಾತ್ರದ ಈರುಳ್ಳಿ 6 ಕೆ.ಜಿ.ಗೆ ₹100, ದಪ್ಪ ಈರುಳ್ಳಿ ಕೆ.ಜಿ.ಗೆ ₹20ರಂತೆ ಮಾರಾಟ ಮಾಡಲಾಗುತ್ತಿದೆ. ಪೈಪೋಟಿಗೆ ಬಿದ್ದವರಂತೆ ತಳ್ಳುಗಾಡಿಯಲ್ಲಿ ಕೂಗುತ್ತಾ ಮಾರಾಟ ಮಾಡುತ್ತಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿತ್ತು.

₹40 ಇದ್ದ ಹಸಿರುಮೆಣಸಿನಕಾಯಿ ₹50ಕ್ಕೆ, ₹40 ಇದ್ದ ಭಜ್ಜಿ ಮೆಣಸಿನಕಾಯಿ ₹60ಕ್ಕೆ, ₹20 ಇದ್ದ ಹೂಕೋಸು ಒಂದಕ್ಕೆ ₹30, ₹20 ಇದ್ದ ಬೂದುಗುಂಬಳ ₹30ಕ್ಕೆ ಏರಿಕೆಯಾಗಿದೆ. ₹40 ಇದ್ದ ಬೀಟ್‌ರೂಟ್‌, ಸುವರ್ಣಗೆಡ್ಡೆ, ಹೀರೇಕಾಯಿ ₹30, ಶುಂಠಿ ₹40, ಮೂಲಂಗಿ ₹20, ಬದನೇಕಾಯಿ, ಕ್ಯಾರೆಟ್‌ ₹20, ಬೀನ್ಸ್‌ ₹40, ನುಗ್ಗೇಕಾಯಿ ₹60, ಗೆಡ್ಡೆಕೋಸು ₹20, ದಪ್ಪ ಮೆಣಸಿನಕಾಯಿ ₹40, ಎಲೆಕೋಸು ₹20, ಹಾಗಲಕಾಯಿ ₹40, ಕುಂಬಳಕಾಯಿ ₹20, ಬೆಂಡೇಕಾಯಿ ₹20, ಮಂಗಳೂರು ಸೌತೇ ₹20, ಸೀಮೇ ಬದನೇಕಾಯಿ ₹30, ಬೆಳ್ಳುಳ್ಳಿ ₹70, ಆಲೂಗೆಡ್ಡೆ ₹30 ರಂತೆ ಮಾರಲಾಗುತ್ತಿದೆ.

ಕಟ್ಟು ಕಿಲಕಿರೆ ₹8, ಕೊತ್ತಂಬರಿ ₹15, ಪುದೀನಾ ₹5, ಸಬ್ಬಸಿಗೆ ₹15, ಮೆಂತ್ಯೆ ₹30, ದಂಟು ₹5, ಕರಿಬೇವು ₹10, ಪಾಲಕ್‌ ₹10ಕ್ಕೆ ಮಾರಾಟವಾಗುತ್ತಿದೆ.

ಸೇಬುಕೆ.ಜಿ.ಗೆ ₹180–200, ದ್ರಾಕ್ಷಿ ₹60, ಸಪೋಟ ₹60, ಮೂಸಂಬಿ ₹80, ದಾಳಿಂಬೆ ₹200, ಕಿತ್ತಳೆ ₹100, ಏಲಕ್ಕಿ ಬಾಳೆ ₹40, ಪಚ್ಚಬಾಳೆ ₹30, ಅನಾನಸ್‌ ಒಂದಕ್ಕೆ ₹40 ರಂತೆ ಮಾರಲಾಗುತ್ತಿದೆ. ಮಾರು ಸೇವಂತಿ ₹50–60, ಮಲ್ಲಿಗೆ ₹50, ಮರಳೆ ₹60, ಕನಕಾಂಬರ ₹40, ಕಾಕಡ ₹50, ಕಣಗಲೆ ₹40 ರಂತೆ ಬಿಕರಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT