ಬುಧವಾರ, ಡಿಸೆಂಬರ್ 11, 2019
27 °C

ಮಂಡ್ಯ: ಹಲವು ಪ್ರಶ್ನೆ ಹುಟ್ಟುಹಾಕಿದ ಕಿಕ್ಕೇರಿ ಕಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಕಿಕ್ಕೇರಿಯಲ್ಲಿ ಪತ್ತೆಯಾಗಿರುವ ಕಾರು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾರು ಬಿಜೆಪಿಯವರಿಗೆ ಸೇರಿದ್ದು ಅದರಲ್ಲಿ ₹ 4 ಕೋಟಿ ಹಣವಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಬಂದ ತಹಶಿಲ್ದಾರ್ ಕಾರು ಪರಿಶೀಲಿಸಿದರು. ಮೆಕ್ಯಾನಿಕ್ ಕರೆಸಿ ಕಾರಿನ ಬಾಗಿಲು ತೆರೆಸಲು ಪ್ರಯತ್ನಿಸಿದರು.

ಕಾರಿನ ಮಾಲೀಕ ಮತ್ತು ಚಾಲಕರ ಹುಡುಕಾಟ ನಡೆದಿದೆ. ಕಾರು ತಪಾಸಣೆಯ ನಂತರ ಅದರಲ್ಲಿ ಹಣವಿಲ್ಲ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು