ಹಲಗೂರು: ಸಮೀಪದ ವಿ.ಬಸಾಪುರ ಗ್ರಾಮದಲ್ಲಿರುವ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಬಸವೇಶ್ವರಸ್ವಾಮಿ ದೇವರ ಬಸಪ್ಪನವರ ಮುದ್ರಾಧಾರಣೆ ಕಾರ್ಯಕ್ರಮ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ.

ಬುಧವಾರ ಸಂಜೆ ಗೋಧೋಳಿ ಲಗ್ನದಲ್ಲಿ ಅಕ್ರೋಧಕ ಗಣಪತಿ ಪೂಜೆ, ಪುಣ್ಯಹಃ ಪಂಚಗವ್ಯ, ಪ್ರೋಕ್ಷಣೆ ಹಾಗೂ ಗಣಪತಿ ಸಹಿತ ಪರಿವಾರ ದೇವತಾ ಹೋಮ, ಲಘು ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಗುರುವಾರ ಬೆಳಿಗ್ಗೆ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಧಾನ ಕಳಸ ಸ್ಥಾಪನೆ, ನವಗ್ರಹ, ಮೃತ್ಯುಂಜಯ ಹೋಮ, ಗ್ರಾಮ ದೇವತಾ ಪೂಜೆ ಅಭಿಷೇಕ, ಗಣಪತಿ ಹಾಗೂ ಪರಿವಾರ ದೇವತಾ ಹೋಮ, ಬಸಪ್ಪನವರಿಗೆ ಮುದ್ರಾಧಾರಣೆ ಮಂತ್ರ ಧೀಕ್ಷೆ ಪ್ರಧಾನ ಹೋಮ, ಕಲಾ ಹೋಮ, ನೂತನ ಕಲ್ಯಾಣಿಯಿಂದ ಹೊ-ಹೊಂಬಾಳೆ ಸಮೇತ ಶ್ರೀ ಕಾರ್ಕಳಿ ಬಸಪ್ಪ, ಹಲಗೂರು ಶ್ರೀ ಅಘೋರ ಭದ್ರಕಾಳಿ ಬಸಪ್ಪ, ಶ್ರೀ ಬಸವೇಶ್ವರ ಬಸಪ್ಪ ವಿ.ಬಸಾಪುರ ದೇವರ ಮೆರವಣಿಗೆ ಮಾಡಲಾಗುತ್ತದೆ. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12-30ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ವಿದ್ವಾನ್ ಪ್ರಸಾದ್ ಅಘೋರ ಹಾಗೂ ಚಂದ್ರಶೇಖರ್ ಆರಾಧ್ಯ ಅವರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿವೆ.

ವಿ.ಬಸಾಪುರ, ಎನ್.ಕೋಡಿಹಳ್ಳಿ, ಒದುಬಸಪ್ಪನದೊಡ್ಡಿ, ಮಾರಗೌಡನಹಳ್ಳಿ, ವಳಗೆರೆದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ನಾಗಣ್ಣ, ನಾಗೇಂದ್ರ, ಬಿ.ಆನಂದ, ಚಂದ್ರಹಾಸ, ಕೆ.ನಂಜುಂಡೇಗೌಡ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-40-1682152718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.