ಕಿಕ್ಕೇರಿ: ನಿರಾಶ್ರಿತರಿಗೆ ಶಕ್ತಿ ತುಂಬುವ ಕೆಲಸವನ್ನು ಸಂಸ್ಥೆ ಆದ್ಯತೆಯಲ್ಲಿ ಮಾಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್ಟಿಒ ಮಲ್ಲಿಕಾರ್ಜುನ್ ಹೇಳಿದರು.

ಹೋಬಳಿಯ ಅನೆಗೊಳ ಗ್ರಾಮವಲಯದ ಅಂಚೆಬೀರನಹಳ್ಳಿ ಗ್ರಾಮದ ಪಾರ್ವತಮ್ಮ ದೇವರಾಜಯ್ಯ ಅವರಿಗೆ ಸೋಮವಾರ ‘ವಾತ್ಸಲ್ಯ’ ಯೋಜನೆಯಡಿ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.

‘ಸಂಸ್ಥೆಯು ಆರೋಗ್ಯ, ಶಿಕ್ಷಣ, ಧಾರ್ಮಿಕ ದಾಸೋಹದ ಜೊತೆಗೆ ಆಶ್ರಯ ಯೋಜನೆಯನ್ನು ತಂದಿದೆ. ನಿರಾಶ್ರಿತರು ಭಯಪಡದೆ ನಿರಾತಂಕವಾಗಿ ಬದುಕಲು ಮುಂದಾಗಿ’ ಎಂದರು.

ಜಿಲ್ಲಾ ನಿರ್ದೇಶಕ ಯೋಗೀಶ್ ಮಾತನಾಡಿ, ‘5 ವರ್ಷಗಳಿಂದ ‘ವಾತ್ಸಲ್ಯ’ ಕಾರ್ಯಕ್ರಮ ಆರಂಭಗೊಂಡಿದ್ದು ಅಸಹಾಯಕರಿಗೆ ಮನೆ ಕಟ್ಟಿಕೊಡುವ, ಮಾಶಾಸನ, ಮನೆ ದುರಸ್ತಿ, ಶೌಚಾಲಯ ನಿರ್ಮಾಣ, ದೈನಂದಿನ ಬಟ್ಟೆ ಕಿಟ್, ವಾತ್ಸಲ್ಯ ಕಿಟ್ ನೀಡುತ್ತಾ ಬಂದಿದೆ. ರಾಜ್ಯದಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ಮಾಶಾಸನ ನೀಡಿದೆ. ನಿರಾಶ್ರಿತರಿಗೆ ಸೋರುವ ಮನೆಗಳನ್ನು ದುರಸ್ತಿ ಮಾಡಲಾಗುವುದು’ ಎಂದು ಹೇಳಿದರು.

ತಾಲ್ಲೂಕು ಯೋಜನಾಧಿಕಾರಿ ಮೂಕಾಂಬಿಕಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್, ನಂಜೇಶ್, ಆನೆಗೊಳ ಶ್ರೀನಿವಾಸ್, ನಿವೃತ್ತ ಶಿಕ್ಷಕ ನಂಜೇಗೌಡ, ಶಂಕರ್, ಜನಜಾಗೃತಿ ವೇದಿಕೆ ಸದಸ್ಯ ನಳಿನಿ, ಸುನೀತಾ, ಮಂಜು, ಶಿವರಾಮು, ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಿನಿ, ಸೇವಾ ಪ್ರತಿನಿಧಿ ಸುಮಾ, ಲತಾ, ಮಂಜುಳಾ, ಪವಿತ್ರಾ, ಜಯಶೀಲಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.