ಕೆ.ಆರ್. ಪೇಟೆ: ಒಂದು ಕಾಲದಲ್ಲಿ ನೂರಾರು ಮಕ್ಕಳಿಗೆ ಆಶ್ರಯ ತಾಣವಾಗಿ, ಹೊತ್ತಿಗೊತ್ತಿಗೆ ತುತ್ತು ಕೊಟ್ಟು ವಿದ್ಯಾವಂತರನ್ನಾಗಿಸಲು ಕೊಡುಗೆ ನೀಡಿದ್ದ ಶೀಳನೆರೆ ಗ್ರಾಮದ ವಸತಿನಿಲಯ ಇಂದು ಪಾಳುಬಿದ್ದು ಅನೈತಿಕ ಚಟುವಟಕೆಗಳ ತಾಣವಾಗಿ ಪರಿಣಮಿಸಿದೆ.

ತಾಲ್ಲೂಕಿನ ಪ್ರಥಮ ಶಾಸಕ, ಸಹಕಾರಿ ಧುರೀಣ ಎಸ್.ಎಂ. ಲಿಂಗಪ್ಪ ಅವರ ಹುಟ್ಟೂರಾದ ಶೀಳನೆರೆಯಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯು ವಸತಿನಿಲಯವನ್ನು ಮೂರು ದಶಕಗಳ ಹಿಂದೆ ತೆರೆಯಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಸತಿನಿಲಯ ಇದಾಗಿದ್ದು, ಹತ್ತಾರು ವರ್ಷ ಯಶಸ್ವಿಯಾಗಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಾಸ್ತವ್ಯ ಮಾಡಿ, ಊಟ ಮಾಡಿಕೊಂಡು ಎಸ್.ಎಸ್.ಎಲ್.ಸಿ. ವರೆಗೆ ಶಿಕ್ಷಣ ಪಡೆದರು.

ಸುಮಾರು 2 ಎಕರೆಗೂ ಹೆಚ್ಚು ಜಾಗದಲ್ಲಿ ವಸತಿ ನಿಲಯದ ಕಟ್ಟಡಗಳಿದ್ದು ವಿದ್ಯಾರ್ಥಿಗಳಿಗೆ ಉಳಿಯಲು ಕೊಠಡಿ, ಸಿಬ್ಬಂದಿಗೆ ಕೊಠಡಿ, ವಿಶಾಲವಾದ ಡೈನಿಂಗ್ ಹಾಲ್, ಗ್ರಂಥಾಲಯ ಕೊಠಡಿ ಸೇರಿದಂತೆ ಹಲವು ಕೊಠಡಿಗಳು ನಿರ್ಮಾಣವಾಗಿದ್ದು 2015-16ರ ನಂತರ ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲುಮುಚ್ಚಿತು.

ಶೀಳನೆರೆ- ಕೆ.ಆರ್. ಪೇಟೆ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಹಾಸ್ಟೆಲ್ ಇದ್ದು ನಿರ್ವಹಣೆಯಿಲ್ಲದೆ ಕಟ್ಟಡಗಳು ಅನಾಥವಾಗಿವೆ. ಹಾಸ್ಟೆಲ್ ಕಟ್ಟಡ ಚೆನ್ನಾಗಿದ್ದರೂ ಪಾಳು ಬಿದ್ದಿರುವುದರಿಂದ ಕಿಟಕಿ, ಬಾಗಿಲುಗಳನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ.

ಕೊಠಡಿಗಳಲ್ಲಿ ತ್ಯಾಜ್ಯ ವಸ್ತುಗಳು, ಮದ್ಯದ ಬಾಟಲಿಗಳು, ಇಸ್ಪೀಟ್ ಎಲೆಗಳು ಅಲ್ಲಲ್ಲಿ ರಾಶಿ ಬಿದ್ದಿವೆ. ಸಮಾಜ ಕಲ್ಯಾಣ ಇಲಾಖೆಯವರು ಇತ್ತ ತಲೆ ಹಾಕದಿರುವುದರಿಂದ ಇದನ್ನು ಅನೈತಿಕ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದೆ ಎಂದು ಗ್ರಾಮದ ಮುಖಂಡರು ಆರೋಪಿಸಿದ್ದಾರೆ.

ಹಾಸ್ಟೆಲ್ ಸುತ್ತಲೂ ಗಿಡಗಂಟಿ ಕಟ್ಟಡದ ಎತ್ತರಕ್ಕೆ ಬೆಳೆದು ನಿಂತಿವೆ. ಇದು ವಿಷಜಂತುಗಳ ತಾಣವಾಗಿದ್ದು, ಇದರಿಂದ ಪಕ್ಕದಲ್ಲೇ ಇರುವ ಶಾಲಾ– ಕಾಲೇಜಿನ ಮಕ್ಕಳು, ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಗಿಡಗಂಟಿ, ಬೇಲಿ ತೆಗೆಸಿ ಸ್ವಚ್ಛಗೊಳಿಸಿದರೆ, ಉಪಯುಕ್ತ ಕಾರ್ಯಗಳಿಗೆ ಕಟ್ಟಡ ಮತ್ತು ಜಾಗವನ್ನು ಬಳಕೆಯಾಗುತ್ತದೆ.

ಆಧುನಿಕ ಸೌಲಭ್ಯಗಳು ಸಾರಿಗೆ ಸಂಪರ್ಕ ಮತ್ತು ಖಾಸಗಿ ಶಾಲೆಗಳು ಹೆಚ್ಚಾದಂತೆ ಪೋಷಕರು ತಮ್ಮ ಮಕ್ಕಳನ್ನು ದೂರದ ಪೇಟೆಗೆ ಸೇರಿಸಲು ಆರಂಭಿಸಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿದು ಈಗ ಹಾಸ್ಟೆಲ್ ಬಾಗಿಲು ಮುಚ್ಚಿದೆ ಎನ್ನಲಾಗುತ್ತಿದೆ.

ಯಾರು ಏನಂತಾರೆ..? ‘ಶಾಲಾ ಶಿಕ್ಷಣ ಇಲಾಖೆಗೆ ವಹಿಸಿ’ ‘ಈ ಹಾಸ್ಟೆಲ್ ಕಟ್ಟಡವನ್ನು ಶಾಲಾ ಶಿಕ್ಷಣ ಇಲಾಖೆಗೆ ವಹಿಸಿದರೆ ಒಂದೇ ಸೂರಿನಡಿ ಪ್ರಾಥಮಿಕ ಪ್ರೌಢ ಮತ್ತು ಪಿಯು ಕಾಲೇಜುವರೆಗಿನ ಶಿಕ್ಷಣವನ್ನು ಗ್ರಾಮೀಣ ಮಕ್ಕಳು ಒಂದೇ ಸೂರಿನಡಿ ಪಡೆಯಲು ಅನುಕೂಲವಾಗುತ್ತದೆ’ – ಶೀಳನೆರೆ ಪ್ರಸನ್ನ ಉಪಾಧ್ಯಕ್ಷ ಪಿಯು ಕಾಲೇಜು ಅಭಿವೃದ್ಧಿ ಸಮಿತಿ *** ‘ಕೆಪಿಎಸ್ ಶಾಲೆ ಮಂಜೂರು ಮಾಡಿ’ ಶೀಳನೆರೆ ಗ್ರಾಮ ಹೋಬಳಿ ಕೇಂದ್ರವಾಗಿದ್ದು ಸುಮಾರು 30ಕ್ಕೂ ಅಧಿಕ ಗ್ರಾಮಗಳು ಸುತ್ತಮುತ್ತ ಇವೆ. ಹೋಬಳಿ ಕೇಂದ್ರವಾದ ಶೀಳನೆರೆ ಅಭಿವೃದ್ಧಿಯಲ್ಲಿ ವಂಚಿತವಾಗಿದೆ. ವಸತಿ ನಿಲಯದ ಪೂರ್ಣ ಜಾಗವನ್ನು ಶಾಲೆಗೆ ವಹಿಸಿಕೊಟ್ಟು ಕೆ.ಪಿ.ಎಸ್. ಶಾಲೆ ಮಂಜೂರು ಮಾಡಿಕೊಟ್ಟರೆ ಗ್ರಾಮಾಂತರ ಮಕ್ಕಳಿಗೆ ಅನುಕೂಲವಾಗುತ್ತದೆ. – ಎಸ್.ಎಲ್. ಮೋಹನ್ ನಿರ್ದೇಶಕ ರಾಜ್ಯ ಸಹಕಾರ ಮಹಾಮಂಡಳಿ *** ‘ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಶೀಳನೆರೆ ಗ್ರಾಮದ ಶೈಕ್ಷಣಿಕ ಅಭಿವೃದ್ಧಿಗಾಗಿ ಅಗತ್ಯ ಕ್ರಮ ವಹಿಸಲಾಗುವುದು. ವಸತಿನಿಲಯದ ಕಟ್ಟಡ ಸಹಿತ ಜಾಗವನ್ನು ಕಾಲೇಜಿಗೆ ವರ್ಗಾಯಿಸಲು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ – ಎಚ್.ಟಿ. ಮಂಜು ಶಾಸಕ ಕೆ.ಆರ್.ಪೇಟೆ

‘ನೀರು ಬಸ್ ಸೌಲಭ್ಯ ಕಲ್ಪಿಸಿ’ ‘ಶೀಳನೆರೆ ಗ್ರಾಮದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕಿದೆ. ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ವಿಭಾಗ ತೆರೆದು ಸ್ಮಾರ್ಟ್ ಕ್ಲಾಸ್ಗೆ ಅಗತ್ಯವಾದ ಸುಸಜ್ಜಿತ ಕೊಠಡಿಗಳ ನಿರ್ಮಾಣವಾಗಬೇಕು. ನೀರಿನ ಕೊರತೆಯಿದ್ದು ಶಾಶ್ವತವಾದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು’ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲ ಕೆ.ಎಂ. ವಾಸುದೇವ ಮತ್ತು ವಿದ್ಯಾರ್ಥಿಗಳ ಪೋಷಕರು. ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕಿನ ಸಹಾಯಕ ನಿರ್ದೇಶಕ ದಿವಾಕರ್ ಪ್ರತಿಕ್ರಿಯಿಸಿ ‘ಮಕ್ಕಳ ಕೊರತೆಯಿಂದ ವಸತಿ ಶಾಲೆಯನ್ನು ಮುಚ್ಚಲಾಗಿದೆ. ಶಾಲಾ ಶಿಕ್ಷಣ ಇಲಾಖೆಯವರು ವಸತಿ ನಿಲಯದ ಜಾಗ ಬೇಕೆಂದು ಮನವಿ ಪತ್ರ ನೀಡಿದರೆ ಮೇಲಾಧಿಕಾರಿಗಳಿಗೆ ಕಳುಹಿಸಿ ಹಸ್ತಾಂತರಕ್ಕೆ ಮುಂದಿನ ಕ್ರಮ ವಹಿಸಲಾಗುವುದು’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.