ಹಂಪಾಪುರ: ‘ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ದೀರ್ಘಕಾಲದ ಹೋರಾಟದ ಫಲವಾಗಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ದೊರೆತಿದೆ’ ಎಂದು ಸಂವಿಧಾನ ಸಂಚಾಲನ ಸಮಿತಿ ಸದಸ್ಯ ಅಕ್ಬರ್ ಪಾಷ ಹೇಳಿದರು.

ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಮತ್ತು ಮುಖಂಡರಿಗೆ ಸಂವಿಧಾನ ಸಂರಕ್ಷಣಾ ಪಡೆಯಿಂದ ಶನಿವಾರ ಆಯೋಜಿಸಿದ್ದ ‘ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಮತದಾನದ ಹಕ್ಕು ಸಿಕ್ಕ ಮೇಲೆ ಪ್ರತಿಯೊಂದು ಸಣ್ಣ ಸಣ್ಣ ಸಮಾಜಕ್ಕೂ ವಿಶೇಷ ಪ್ರಾತಿನಿಧ್ಯ ಸಿಕ್ಕಿದೆ. ಹಕ್ಕಿನ ಫಲವಾಗಿ ನಾವು ಇಂದು ಸ್ವತಂತ್ರವಾಗಿ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ, ಈ ಹಕ್ಕನ್ನೇ ಕಗ್ಗೊಲೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಏಕಾಧಿಪತ್ಯ ಸ್ಥಾಪಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

‘ಎಸ್ಐಆರ್ ಜಾರಿಯಿಂದ ಅನಕ್ಷರಸ್ಥರು, ದಲಿತರು, ಅಲ್ಪಸಂಖ್ಯಾತರು, ಗಿರಿಜನರು, ಕ್ರಿಶ್ಚಿಯನ್ನರು ಮತದಾನದ ಹಕ್ಕಿನಿಂದ ವಂಚಿತರರಾಗುತ್ತಿದ್ದು, ಈ ದೇಶದ ಪೌರತ್ವವನ್ನೇ ಕಳೆದುಕೊಳ್ಳುವ ಭೀತಿಯಲಿದ್ದಾರೆ. ಆದ್ದರಿಂದ ಪ್ರತಿ ಹಳ್ಳಿಯಲ್ಲಿಯೂ ಮತ್ತು ಪ್ರತಿ ಮನೆಯಲ್ಲಿಯೂ ಎಚ್ಚೆತುಕೊಳ್ಳಬೇಕಾಗಿದೆ’ ಎಂದರು.

ಸಂವಿಧಾನ ಸಂರಕ್ಷಣಾ ಪಡೆಯ ವಲಯ ಸಂಯೋಜಕ ಜೀವಿಕ ಉಮೇಶ್ ಮಾತನಾಡಿ, ‘ಚುನಾವಣೆ ಆಯೋಗ ಮತದಾರರ ಪಟ್ಟಿ ಅಂತಿಮಗೊಳಿಸುವ ಮುನ್ನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ, ವಾರ್ಡ್ ಸಭೆ ಕರೆದು ಸಭೆಯ ಮುಂದೆ ಪಟ್ಟಿಯನ್ನು ಓದಿ ಸೇರಿರುವವರು ಮತ್ತು ಬಿಟ್ಟಿರುವವರ ಹೆಸರನ್ನು ಸಾರ್ವಜನಿಕವಾಗಿ ತಿಳಿಸಿ ನಂತರ ಜನರ ಒಪ್ಪಿಗೆ ಮೇರೆಗೆ ಪಟ್ಟಿ ಬಿಡುಗಡೆ ಮಾಡಿ’ ಎಂದು ಮನವಿ ಮಾಡಿದರು.

ಜಿಲ್ಲಾ ಸಂಚಾಲಕ ಬಸವರಾಜ್, ತಾಲ್ಲೂಕು ಸಂಚಾಲಕ ಚಂದ್ರಶೇಖರಮೂರ್ತಿ, ಖಂಡೇಗೌಡನಪುರ ಸೋಮೇಶ್, ಶಿವಯ್ಯ, ಹೊಮ್ಮರಗಳ್ಳಿ ಸಿದ್ದರಾಜು, ದಲಿತ ಮುಖಂಡ ಕೆಂಪರಾಜು, ದಸಂಸ ಮುಖಂಡ ಸಿದ್ದರಾಜು, ಕೆ.ಎಂ. ಮರಿಯಪ್ಪ, ಭೋಗನಂಜ, ಸೋಮಣ್ಣ, ಮಲ್ಲಿಗಮ್ಮ, ಶಿವಯ್ಯ, ಬಂಗಾರಪ್ಪ, ಶೆಟ್ಟಯ್ಯ, ಶಿವಮಾದು, ರವಿಕುಮಾರ್, ಶ್ರೀನಿವಾಸ್, ಲಿಂಗರಾಜ, ಶಕೀಲ್ ಅಹಮದ್, ಶಿವಮಲ್ಲು, ಮಲ್ಲೇಶ್, ಮಲ್ಲಬೋವಿ, ಕೇಶವಮೂರ್ತಿ, ರಾಜಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-38-984895760

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.