ಬನ್ನಹಳ್ಳಿಯಲ್ಲಿ ಮಳೆಗಾಗಿ ಕತ್ತೆಗಳ ಮದುವೆ

7

ಬನ್ನಹಳ್ಳಿಯಲ್ಲಿ ಮಳೆಗಾಗಿ ಕತ್ತೆಗಳ ಮದುವೆ

Published:
Updated:
Deccan Herald

ಶ್ರೀರಂಗಪಟ್ಟಣ: ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಬನ್ನಹಳ್ಳಿ ಗ್ರಾಮದ ಸರ್‌ ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗದ ಸದಸ್ಯರು ಭಾನುವಾರ ಕತ್ತೆಗಳಿಗೆ ಮದುವೆ ಮಾಡಿಸಿದರು.

ಮಂಡ್ಯ ತಾಲ್ಲೂಕು ಮೊತ್ತಹಳ್ಳಿಯಿಂದ ಕತ್ತೆಗಳನ್ನು ಹಿಡಿದು ತಂದು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಲಾಯಿತು. ಗ್ರಾಮದ ತಿರುಮಲ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಎಂಬವರ ಪೌರೋಹಿತ್ಯ ವಹಿಸಿದ್ದರು. ‘ಕಾಶಿಯಾತ್ರೆ’ಯಿಂದ ‘ಸಪ್ತಪದಿ’ ತುಳಿಯುವವರೆಗೆ ವಿವಾಹದ ಎಲ್ಲ ವಿಧಿ, ವಿಧಾನಗಳ ಜರುಗಿದವು. ಹೆಣ್ಣು ಕತ್ತೆಗೆ ಅರಿಸಿನದ ಕೊಂಬು ಮಾಂಗಲ್ಯ ಧಾರಣೆ ಮಾಡಿಸಲಾಯಿತು.

ದೇವಾಲಯದ ಬಳಿ ಮದುವೆಯ ಸಾಂಪ್ರದಾಯಿಕ ಆಚರಣೆಗಳು ಮುಗಿದ ಗ್ರಾಮದ ಬೀದಿಗಳಲ್ಲಿ ಜೋಡಿ ಕತ್ತೆಗಳ ಮೆರವಣಿಗೆ ನಡೆಯಿತು. ಪ್ರತಿ ಮನೆಯ ಮುಂದೆ ಕತ್ತೆಗಳು ಬಂದಾಗ ಜನರು ನೀರು ಸುರಿದು ಪೂಜೆ ಸಲ್ಲಿಸಿದರು. ಸಂಜೆ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

‘ಧಾರಾಕಾರ ಮಳೆಗೆ ಕೊಡಗು ಜಿಲ್ಲೆ ಕೊಚ್ಚಿ ಹೋಗಿದೆ. ಕೇರಳದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಬನ್ನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ವರ್ಷದ ಆರಂಭದಿಂದ ಇದುವರೆಗೆ ಒಂದು ಹನಿ ಮಳೆ ಬಿದ್ದಿಲ್ಲ. ಮಳೆಯನ್ನೇ ಆಶ್ರಯಿಸಿರುವ ಅರಕೆರೆ ಹೋಬಳಿ ಅಕ್ಷರಶಃ ಬೆಂಗಾಡಾಗಿದೆ. ರೈತರು ಕಂಗಾಲಾಗಿದ್ದು, ಹಿರಿಯರ ಸಲಹೆಯಂತೆ ಕತ್ತೆಗಳಿಗೆ ಮದುವೆ ಮಾಡಿಸಿ ಅನ್ನದಾನ ಮಾಡುತ್ತಿದ್ದೇವೆ’ ಎಂದು ಗ್ರಾಮದ ಸರ್‌ ಎಂ.ವಿಶ್ವೇಶ್ವರಯ್ಯ ಯುವಕರ ಬಳಗದ ಪ್ರತೀಪ್‌, ಅಂಗಡಿ ಕೃಷ್ಣ, ಮಹೇಶ್‌, ಶಂಕರೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !