ಮಂಡ್ಯ: ‘ಗೂಟದ ಕಾರಿಗೆ ಹಪಹಪಿಸುವ ರಾಜಕಾರಣವನ್ನು ಪ್ರಸ್ತುತದಲ್ಲಿ ನೋಡುತ್ತಿದ್ದೇವೆ. ಆದರೆ ನಾವು ನಂಬುವ ತತ್ವಕ್ಕಿಂತ ಬದುಕುವ ರೀತಿ ಮುಖ್ಯ ಎಂಬುದನ್ನು ರಾಜಕಾರಣದಲ್ಲಿ ತೋರಿಸಿಕೊಟ್ಟವರು ನಾಗಮಂಗಲದ ಕೆ.ಸಿಂಗಾರಿಗೌಡರು’ ಎಂದು ಸಾಹಿತಿ ಪದ್ಮಾ ಶೇಖರ್ ಹೇಳಿದರು.

ನಗರದ ಕೆ.ವಿ.ಎಸ್ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಶನಿವಾರ ನಡೆದ ಡಾ.ರಾಗೌ ಸಾಹಿತ್ಯ ಪ್ರಶಸ್ತಿ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಎರಡು ಬಾರಿ ಶಾಸಕರಾಗಿಯೂ ಸ್ವಂತ ಕಾರನ್ನು ಹೊಂದಿರದ ಪ್ರಬುದ್ಧ ರಾಜಕಾರಣಿಯಾಗಿ ಸರಳ ಜೀವನ ನಡೆಸಿದರು. ಇವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಪುಣ್ಯದ ಕೆಲಸ. ಜನಪದ ವಿದ್ವಾಂಸ ರಾಗೌ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಸಂತಸ ತಂದಿದೆ ಎಂದು ಶ್ಲಾಘಿಸಿದರು.

‘ಇವತ್ತಿನ ರಾಜಕಾರಣಿಗಳು ಸ್ವಜನ ಪಕ್ಷಪಾತ, ಸ್ವಹಿತಾಕಾಂಕ್ಷೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸುಳ್ಳಿನ ಕೋಟೆಯೊಳಗೆ ರಾಜಕಾರಣ ಸುತ್ತಾಡುತ್ತಿದೆ. ಜನಹಿತ ಎನ್ನುವಂತದ್ದು ನಮ್ಮ ಕಣ್ಣಿಗೆ ದೂರದ ಬೆಟ್ಟವಾಗಿದೆ. ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ರಾಜಕಾರಣ ಹಾಳಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಒಂದು ಗಂಟೆ ಕಾರ್ಯಕ್ರಮದಲ್ಲಿ ಭಾಷಣ ಕೇಳಿದರೆ ಸಾಕು ಹತ್ತು ಪುಸ್ತಕಗಳನ್ನು ಓದಿದಷ್ಟೇ ಮಾಹಿತಿ ಸಿಗುತ್ತದೆ. ಆದರೆ ವಿಪರ್ಯಾಸವೆಂದರೆ ಯಾರು ಸಹ ಕಾರ್ಯಕ್ರಮಕ್ಕೆ ಭಾಗವಹಿಸುವುದಾಗಲಿ ಅಥವಾ ನೋಡುವುದಾಗಲಿ ಮಾಡುವುದೇ ಇಲ್ಲ. ಜನರು ನಿರಾಸಕ್ತಿ ತೋರುತ್ತಿರುವುದು ಏಕೆ ಎಂಬುದನ್ನು ನೋಡಬೇಕು. ಅಂತರಂಗ ವಿಶ್ಲೇಷಣೆ ಮಾಡುವ ಅವಶ್ಯ ಪ್ರಸ್ತುತದಲ್ಲಿ ಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಡಾ.ರಾಗೌ ಸಾಹಿತ್ಯ ಪ್ರಶಸ್ತಿಯನ್ನು ಕವಿ ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಯನ್ನು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಹಾ.ಮ. ನಾಗಾರ್ಜುನ ಅವರಿಗೆ ತಲಾ ₹20 ಸಾವಿರ ಮತ್ತು ಫಲಕದೊಂದಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಉಪನ್ಯಾಸಕಿ ಎಂ.ಎಸ್.ಅನಿತಾ, ಸಿಂಗಾರಿಗೌಡರ ಮಗ ಕೆ.ಎಸ್. ಆನಂದ್, ಸಾಹಿತಿ ರಾಮೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್, ನಿರ್ದೇಶಕರಾದ ಕೋಣನಹಳ್ಳಿ ಜಯರಾಮು, ಮಂಜುಳಾ ಉದಯಶಂಕರ್, ತಗ್ಗಹಳ್ಳಿ ವೆಂಕಟೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.