ಬುಧವಾರ, ಜೂನ್ 3, 2020
27 °C

ಮಂಡ್ಯ | ಮುಟ್ಟಿದರೆ ಸೋಂಕು ಹರಡುತ್ತೇವೆ: ಬೆದರಿಕೆ ಹಾಕಿ ಯುವಕರ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ನಮಗೆ ಕೊರೊನಾ ಸೋಂಕಿದ್ದು ಕೈಗೆ ಸೀಲ್‌ ಹಾಕಿದ್ದಾರೆ. ನಾವು ಕ್ವಾರಂಟೈನ್‌ನಲ್ಲಿ ಇರಬೇಕು ಅಂತ ಆದೇಶವಿದೆ. ನಮ್ಮನ್ನು ಮುಟ್ಟಿದರೆ ನಿಮಗೂ ಸೋಂಕು ಹರಡುತ್ತದೆ’ ಎಂದು ಕೆ.ಆರ್‌.ಪೇಟೆ ತಾಲ್ಲೂಕಿನ ಹಾದನೂರು ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರಿಗೆ ಬೆದರಿಕೆ ಹಾಕಿ ನಾಲ್ವರು ಯುವಕರು ಬುಧವಾರ ರಾತ್ರಿ ಪರಾರಿಯಾಗಿದ್ದಾರೆ.

ರಾತ್ರಿ 11 ಗಂಟೆ ವೇಳೆ ನಾಲ್ವರು ಯುವಕರು ಮೈಸೂರು ಕಡೆಯಿಂದ ಕೆ.ಆರ್‌.ಪೇಟೆ ಕಡೆಗೆ ಆಟೊದಲ್ಲಿ ಬಂದಿದ್ದರು. ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್‌ ಸಿಬ್ಬಂದಿ ತಡೆದಾಗ, ಹತ್ತಿರ ಬಂದರೆ ಮುಟ್ಟಿ, ರೋಗ ಹರಡುವುದಾಗಿ ಬೆದರಿಕೆ ಹಾಕಿದರು.

ಬ್ಯಾರಿಕೇಡ್‌ಗಳನ್ನು ತಾವೇ ಪಕ್ಕಕ್ಕೆ ಸರಿಸಿ ಮುಂದಕ್ಕೆ ತೆರಳಿದರು. ಪೊಲೀಸರು ಆಟೊವನ್ನು ಹಿಂಬಾಲಿಸಿದರಾದರೂ, ಕತ್ತಲಲ್ಲಿ ರಾಜ್ಯ ಹೆದ್ದಾರಿ ಬಿಟ್ಟು ಹಳ್ಳಿ ರಸ್ತೆಯಲ್ಲಿ ತೆರಳಿದ ಕಾರಣ ಆಟೊ ಪತ್ತೆಯಾಗಿಲ್ಲ.

ಸ್ಥಳಕ್ಕೆ ಬಂದ ಕೆ.ಆರ್‌.ಪೇಟೆ ತಹಶೀಲ್ದಾರ್‌ ಎಂ.ಶಿವಮೂರ್ತಿ, ಪಟ್ಟಣ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬ್ಯಾಟರಾಯಗೌಡ ಚೆಕ್‌ಪೋಸ್ಟ್‌ ಸಿಬ್ಬಂದಿಯಿಂದ ಮಾಹಿತಿ ಪಡೆದರು. 

ತಾಲ್ಲೂಕಿನ ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ ಬಿಗಿಗೊಳಿಸಲಾಗಿದ್ದು ತಾಲ್ಲೂಕು ಪ್ರವೇಶ ಮಾಡಿರುವ ಅಪರಿಚಿತ ಯುವಕರನ್ನು ಪತ್ತೆ ಮಾಡಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು