ಮ್ಯಾನ್‌ಹೋಲ್ ಪ್ರಕರಣ: ಐವರ ವಿರುದ್ಧ ಎಫ್‌ಐಆರ್

7

ಮ್ಯಾನ್‌ಹೋಲ್ ಪ್ರಕರಣ: ಐವರ ವಿರುದ್ಧ ಎಫ್‌ಐಆರ್

Published:
Updated:

ಶಿವಮೊಗ್ಗ: ಆರ್‌ಎಂಎಲ್‌ ನಗರ ಎರಡನೇ ಹಂತದ ಮ್ಯಾನ್‌ಹೋಲ್‌ಗೆ ಇಳಿದು ಸೋಮವಾರ ಇಬ್ಬರು ಮೃತಪಟ್ಟ ಪ್ರಕರಣದಲ್ಲಿ ಮೂವರು ಎಂಜಿನಿಯರ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಅಂದು ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಸಹಾಯಕ ಎಂಜಿನಿಯರ್, ಹೈದರಾಬಾದ್ ಮೂಲದ ಗುತ್ತಿಗೆದಾರ (ವೆಂಕಟಸಾಯಿ ಅಸೋಸಿಯೇಟ್ಸ್) ಹಾಗೂ ಮೇಸ್ತ್ರಿ (ತಿಪ್ಪೇಸ್ವಾಮಿ) ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೃತರಿಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ತಿಳಿದಿದ್ದರೂ, ಅವರಿಗೆ ಯಾವುದೇ ಸುರಕ್ಷತಾ ಪರಿಕರ ನೀಡದೆ, ಮುಂಜಾಗ್ರತೆ ವಹಿಸದೆ ಮ್ಯಾನ್‌ಹೋಲ್‌ಗೆ ಇಳಿಸಲಾಗಿದೆ. ನಿರ್ಲಕ್ಷ್ಯದ ಪರಿಣಾಮ ಸಾವು ಸಂಭವಿಸಿದೆ. ಹಾಗಾಗಿ, ಆರೋಪಿತರ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ, ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಿ. ಮಲ್ಲೇಶಪ್ಪ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !