ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ಪರೀಕ್ಷೆ ಶುರು

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಬೀಜಿಂಗ್ : ಚೀನಾದ ಮೊದಲ ಸಂಪೂರ್ಣ ಸ್ವದೇಶಿ ನಿರ್ಮಿತ ಯುದ್ಧವಿಮಾನ ವಾಹಕ ನೌಕೆಯು ಸಮುದ್ರ ಮಾರ್ಗದಲ್ಲಿ ತನ್ನ ಪರೀಕ್ಷಾರ್ಥ ಸಂಚಾರವನ್ನು ಭಾನುವಾರ ಆರಂಭಿಸಿತು.

ವಿವಾದಿತ ಸಮುದ್ರ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸುವುದು ಹಾಗೂ ಚೀನಾದ ಸೇನಾ ಶಕ್ತಿಯನ್ನು ಬಲಗೊಳಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ ನೌಕೆಯು ಸಮುದ್ರಕ್ಕೆ ಇಳಿದಿದೆ.

ಇದು ಮೊದಲ ಸ್ವದೇಶಿ ನಿರ್ಮಿತ ಹಾಗೂ ದೇಶದ ಎರಡನೇ ವಿಮಾನವಾಹಕ ನೌಕೆ ಎನಿಸಿದ್ದು, 2020ರಲ್ಲಿ ಸೇನೆಗೆ ಸೇರ್ಪಡೆಯಾಗಲಿದೆ. ನೌಕೆಯ ಪ್ರೊಪಲ್ಷನ್ ವ್ಯವಸ್ಥೆಯ ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯನ್ನು ಪರೀಕ್ಷೆಗೊಳಸಪಡಿಸಲಾಗುತ್ತಿದೆ. ಇದಕ್ಕೆ ಅಧಿಕೃತವಾಗಿ ಇನ್ನೂ ಹೆಸರಿಟ್ಟಿಲ್ಲ.

ಲಿಯೊನಿಂಗ್ ನೌಕೆಯು ಸೇನೆಯಲ್ಲಿ ಈಗಾಗಲೇ ಕಾರ್ಯನಿರತವಾಗಿದೆ. ಮೂರನೇ ನೌಕೆಯನ್ನು ಶಾಂಘೈನಲ್ಲಿ ನಿರ್ಮಿಸಲಾಗುತ್ತಿದೆ. 2030ರ ವೇಳೆಗೆ ಚೀನಾ ಒಟ್ಟು ನಾಲ್ಕು ಯುದ್ಧವಿಮಾನ ವಾಹಕ ನೌಕೆಗಳನ್ನು ಹೊಂದುವ ಗುರಿ ಇಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಅಣ್ವಸ್ತ್ರ ಸಾಮರ್ಥ್ಯದ ನೌಕೆಯನ್ನು ಕಟ್ಟುವ ಆಲೋಚನೆಯನ್ನೂ ಚೀನಾ ಹೊಂದಿದೆ.
**
ಅಂಕಿ–ಅಂಶ

50 ಸಾವಿರ ಟನ್
ನೌಕೆಯ ತೂಕ

3600
ನೌಕೆಯಲ್ಲಿರುವ ಕ್ಯಾಬಿನ್‌ಗಳು

3000
ನೌಕೆ ನಿರ್ಮಾಣಕ್ಕೆ ದುಡಿದ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT