ದೇವಾಲಯ ನೆಮ್ಮದಿ ನೀಡುವ ತಾಣ

7
ಚನ್ನಮಾನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಳಿಸಿದ ಮಾರಮ್ಮ ದೇವಾಲಯ ಉದ್ಘಾಟನೆ

ದೇವಾಲಯ ನೆಮ್ಮದಿ ನೀಡುವ ತಾಣ

Published:
Updated:
Deccan Herald

ರಾಮನಗರ: ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನೆಲೆಸಲು ದೇವಾಲಯಗಳು ಸಹಕಾರಿಯಾಗಲಿವೆ ಎಂದು ಜೆಡಿಎಸ್ ನಾಯಕಿ ಅನಿತಾಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಚನ್ನಮಾನಹಳ್ಳಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳಿಸಿರುವ ಮಾರಮ್ಮ ದೇವಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ, ಉತ್ಸವಗಳನ್ನು ಆಚರಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಎಲ್ಲರಿಗೂ ನೆಮ್ಮದಿಯ ಅವಶ್ಯಕತೆ ಇದೆ ಎಂದರು.

‘ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿ ಒಗ್ಗಟ್ಟನ್ನು ಪ್ರದರ್ಶಿಸಲು ದೇವಸ್ಥಾನಗಳು ಸಹಕಾರಿಯಾಗಲಿವೆ. ದೇವಾಲಯಗಳು ಮನುಷ್ಯರಿಗೆ ನೆಮ್ಮದಿ ನೀಡುವ ತಾಣಗಳಾಗಿವೆ’ ಎಂದು ತಿಳಿಸಿದರು.

ನಿಮ್ಮ ಸಹಕಾರದಿಂದ ಮುಖ್ಯಮಂತ್ರಿ: ನಿಮ್ಮೆಲ್ಲರ ಸಹಕಾರದಿಂದ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಪಕ್ಷಾತೀತ ನಾಯಕ: ದೇಶ ಒಬ್ಬ ಪ್ರಭಾವಿ ರಾಜಕಾರಣಿಯನ್ನು ಕಳೆದುಕೊಂಡಿದೆ. ಅಟಲ್ ಬಿಹಾರ್ ವಾಜಪೇಯಿ ಅವರು ಪಕ್ಷಾತೀತ ಜನ ನಾಯಕರಾಗಿದ್ದರು ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವತ್ಥ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಭಾವತಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಚ್.ಎನ್. ಲಕ್ಷ್ಮಿಕಾಂತ್, ಭದ್ರಯ್ಯ, ನಗರ ಸಭಾ ಸದಸ್ಯ ಆರ್.ಎ. ಮಂಜುನಾಥ್, ಜೆಡಿಎಸ್‌ ಮುಖಂಡರಾದ ರಾಜಶೇಖರ್, ಎಚ್.ಸಿ.ರಾಜಣ್ಣ, ಬಿ. ಉಮೇಶ್, ದೊರೆಸ್ವಾಮಿ, ಕುರುಬರ ಸಂಘದ ಉಪಾಧ್ಯಕ್ಷ ನಾಗೇಶ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭಾಸ್ಕರ್‌, ಕಾರ್ಯದರ್ಶಿ ರೇವಣ್ಣ, ಗೌರವಾಧ್ಯಕ್ಷ ಹೊನ್ನಯ್ಯ, ಮುಖಂಡರಾದ ಅಪ್ಪಾಜಣ್ಣ, ಬೋರಲಿಂಗಯ್ಯ, ಡೈರಿ ಅರ್ಕೇಶ್‌, ರಾಚಾಚಾರಿ, ಸಿ.ಎಂ. ಮಲ್ಲಯ್ಯ, ಶಿವರಾಮಯ್ಯ, ಎಚ್. ಸುರೇಶ್, ರಾಮಕೃಷ್ಣಯ್ಯ, ಗುತ್ತಲಯ್ಯ, ಶಶಿಕುಮಾರ್‌, ಹರೀಶ್, ವಕೀಲ ರಾಜಶೇಖರ್, ಜಯಕುಮಾರ್‌, ಬಲಮುರಿ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಗಣೇಶ್‍ ಭಟ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !