ಶುಕ್ರವಾರ, ಅಕ್ಟೋಬರ್ 23, 2020
24 °C

ತರಕಾರಿ ದರ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾರುಕಟ್ಟೆಗಳಲ್ಲಿ ಮೂರು ದಿನಗಳಿಂದ ತರಕಾರಿ ದರಗಳು ದಿಢೀರ್ ಕುಸಿತ ಕಂಡಿವೆ. ಬಂದ್ ಇದ್ದ ಕಾರಣಕ್ಕೆ ವ್ಯಾಪಾರ ನಡೆಯುವ ಅನುಮಾನದಿಂದ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾಗಿತ್ತು. ಈ ವಾರದಲ್ಲಿ ತರಕಾರಿ ದರ ಮತ್ತೆ ಏರುವ ನಿರೀಕ್ಷೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕಳೆದ ವಾರ ಬೀನ್ಸ್, ಕ್ಯಾರೆಟ್ ದರ ₹100ಕ್ಕೆ ಏರಿತ್ತು. ಈಗ ಬೀನ್ಸ್ ಪ್ರತಿ ಕೆ.ಜಿ.ಗೆ ₹60 ಹಾಗೂ ಕ್ಯಾರೆಟ್ ₹80ರಂತೆ ಸಗಟು ಮಾರುಕಟ್ಟೆಗಳಲ್ಲಿ ಮಂಗಳವಾರ ಮಾರಾಟವಾಯಿತು.

ಬೆಂಡೆಕಾಯಿ ದರ ತುಸು ಏರಿದೆ. ಈರುಳ್ಳಿ, ಟೊಮೆಟೊ, ಬದನೆ, ಮೆಣಸಿನಕಾಯಿ, ಹೂಕೋಸು, ಮೂಲಂಗಿ ಬೆಲೆ ಸ್ಥಿರವಾಗಿದ್ದು, ಸೊಪ್ಪಿನ ದರಗಳಲ್ಲೂ ಯಾವುದೇ ವ್ಯತ್ಯಾಸವಿಲ್ಲ.

'ಮಾರುಕಟ್ಟೆಗಳಿಗೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಆವಕವಾದರೂ ಕಳೆದ ಶುಕ್ರವಾರ ಹಾಗೂ ಸೋಮವಾರ ರಾಜ್ಯದಲ್ಲಿ ಬಂದ್ ಇದ್ದ ಕಾರಣಕ್ಕೆ ತರಕಾರಿಗಳಿಗೆ ಬೇಡಿಕೆ ಕಡಿಮೆ ಇತ್ತು. ವ್ಯಾಪಾರಿಗಳು ಬಂದ್ ಇದ್ದರೆ ವ್ಯಾಪಾರ ನಡೆಯುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿ ಹೆಚ್ಚಾಗಿ ತರಕಾರಿ ಖರೀದಿಸಲಿಲ್ಲ. ಇದರಿಂದ  ಬೆಲೆಗಳು ಕಡಿಮೆಯಾಗಿದೆ' ಎಂದು ದಾಸನಪುರ ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಿಯೊಬ್ಬರು ತಿಳಿಸಿದರು.

'ಕೊರೊನಾ ಸೋಂಕಿನ ಪರಿಸ್ಥಿತಿಯು ಕೊಂಚ ನಿಯಂತ್ರಣಕ್ಕೆ ಬಂದಿರುವುದರಿಂದ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುವ ಸಂಭವವಿದೆ. ಆಗ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಈ ವಾರದಿಂದಲೇ ತರಕಾರಿ ದರಗಳು ಮತ್ತೆ ಏರುವ ನಿರೀಕ್ಷೆ ಇದೆ' ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು