ವಿವಿಧೆಡೆ ಎಂ.ಬಿ.ಪಾಟೀಲ ಜನ್ಮದಿನ ಆಚರಣೆ

7

ವಿವಿಧೆಡೆ ಎಂ.ಬಿ.ಪಾಟೀಲ ಜನ್ಮದಿನ ಆಚರಣೆ

Published:
Updated:

ವಿಜಯಪುರ: ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಜನ್ಮದಿನದ ಅಂಗವಾಗಿ, ಜಿಲ್ಲೆಯ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ರೈತರಿಗೂ ಸಸಿ ವಿತರಿಸುವ ಕಾರ್ಯಕ್ರಮ ನಡೆದವು. ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಲಾಯಿತು.

ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ ನಡೆದವು. ಶಾಲಾ ಮಕ್ಕಳಿಗೆ, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಪೆನ್ನು ವಿತರಿಸಿದರು. ರಕ್ತದಾನ, ನೇತ್ರದಾನದ ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮವೂ ನಡೆದವು. 25ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರೆ, ಐವರು ನೇತ್ರದಾನಕ್ಕೆ ಸಮ್ಮತಿಯ ಪತ್ರ ನೀಡಿದ್ದು ವಿಶೇಷವಾಗಿತ್ತು.

ಹಣ್ಣು, ಹಾಲು ವಿತರಣೆಯೂ ನಡೆಯಿತು. ಕೆಲವೆಡೆ ಯುವಕರು ಬೈಕ್‌ ರ್‌್ಯಾಲಿ ನಡೆಸಿ ಸಂಭ್ರಮಿಸಿದರು. ವಿಶೇಷ ಉಪನ್ಯಾಸ, ಸ್ಪರ್ಧೆಗಳು ನಡೆದವು. ಕೆಲ ಅಭಿಮಾನಿಗಳು ಉಚಿತವಾಗಿ ಕ್ಷೌರ ಮಾಡಿದರೆ, ಇನ್ನೂ ಹಲವರು ಉಚಿತವಾಗಿ ಚಹಾ ವಿತರಿಸಿ ಗಮನ ಸೆಳೆದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !