ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ

7

ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ

Published:
Updated:
ಅಂದಾನಿ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಲು ಅಳೆಯುವ ಮೂಲಕ ವೇಣುಗೋಪಾಲ್‌ ಉದ್ಘಾಟಿಸಿದರು.

ಕುದೂರು(ಮಾಗಡಿ): ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ನಂಬಿಕೊಂಡು ಸಾಲಶೂಲ ಮಾಡುವ ಬದಲು ರೈತರು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಬೆಳೆಯಲು ಮುಂದಾಗಬೇಕು ಎಂದು ಸೋಲೂರು ಡೈರಿಯ ವ್ಯವಸ್ಥಾಪಕ ವೇಣುಗೋಪಾಲ್‌ ತಿಳಿಸಿದರು.

ಅಂದಾನಿ ಪಾಳ್ಯದಲ್ಲಿ ಶುಕ್ರವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಮನೆಯಲ್ಲೂ ಒಂದೊಂದು ಹಸು ಸಾಕಬೇಕು. ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯತ್ವ ಪಡೆದುಕೊಂಡು ಹಾಲನ್ನು ಡೈರಿಗೆ ಹಾಕಿ ಹಣ ಸಂಪಾದಿಸಲು ಮುಂದಾಗಬೇಕು ಎಂದು ತಿಳಿಸಿದರು.

ನೂತನ ಡೈರಿ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಎಂ.ಹರೀಶ್‌, ಕಾರ್ಯದರ್ಶಿ ಸಂತೋಷ್‌, ಡೈರಿ ಬೆಳವಣಿಗೆ ಕುರಿತು ಮಾತನಾಡಿದರು.

ಸದಸ್ಯರಾದ ಧನಂಜಯ, ವೆಂಕಟೇಶ್‌, ಸಿದ್ದಪ್ಪ, ಜಯರಾಮು, ಗಂಗಣ್ಣ, ನಾಗಮ್ಮ, ಸುಮಿತ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !