ಗುಜರಾತ್‌ ಪ್ರವಾಸಕ್ಕೆ ತಾಲ್ಲೂಕು ಹಾಲು ಉತ್ಪಾದಕರು

7

ಗುಜರಾತ್‌ ಪ್ರವಾಸಕ್ಕೆ ತಾಲ್ಲೂಕು ಹಾಲು ಉತ್ಪಾದಕರು

Published:
Updated:
Deccan Herald

ಚನ್ನಪಟ್ಟಣ: ಹೈನುಗಾರಿಕೆ ಕುರಿತು ಅರಿವು ಮೂಡಿಸುವ ಸಲುವಾಗಿ ತಾಲ್ಲೂಕಿನ ಹಾಲು ಉತ್ಪಾದಕರಿಗೆ ಉಚಿತವಾಗಿ ಗುಜರಾತ್ ಅಮೂಲ್ ಪ್ರವಾಸ ಏರ್ಪಡಿಸಲಾಗಿದೆ ಎಂದು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ಕೆಂಗಲ್ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಸೋಮವಾರ ತಾಲ್ಲೂಕಿನ ವಿವಿಧ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ 30 ಪ್ರತಿನಿಧಿಗಳು ಗುಜರಾತ್ ಅಮೂಲ್ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರವಾಸದ ಸಂದರ್ಭದಲ್ಲಿ ಹಾಲಿನ ಗುಣಮಟ್ಟ, ರಾಸುಗಳ ನಿರ್ವಹಣೆ, ವೈದ್ಯಕೀಯ ಉಪಚಾರ, ವೈವಿಧ್ಯ ತಳಿಗಳು, ಬಲ್ಕ್ ಮಿಲ್ಕ್ ಕೂಲರ್‌ಗಳ ನಿರ್ವಹಣೆಯ ಅಧ್ಯಯನ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.

‘ಗುಜರಾತ್‌ನಲ್ಲಿ ಹೈನು ಅಭಿವೃದ್ಧಿಯನ್ನು ವೀಕ್ಷಿಸಿ ಅಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ನಮ್ಮ ಹಾಲು ಉತ್ಪಾದಕರು ಅನುಸರಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕು. ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ತಾವು ಹೆಚ್ಚಿನ ದರ ಪಡೆಯಬಹುದಲ್ಲದೆ ಒಕ್ಕೂಟದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿವೆ. ಅವರು ವೈಜ್ಞಾನಿಕ ಮಾದರಿ ಹಾಗೂ ತಾಂತ್ರಿಕತೆ ಅಳವಡಿಸಿಕೊಳ್ಳಲಿ ಎಂಬ ಕಾರಣಕ್ಕೆ ಈ ಪ್ರವಾಸ ಏರ್ಪಡಿಸಲಾಗಿದೆ’ ಎಂದರು.

ಬಮೂಲ್ ಶಿಬಿರದ ಉಪವ್ಯವಸ್ಥಾಪಕ ಡಾ.ಕೆ.ಸಿ. ಶ್ರೀಧರ್ ಮಾತನಾಡಿ, ಗುಜರಾತ್ ರಾಜ್ಯವು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇಲ್ಲಿಯೂ ಆ ವಿಧಾನಗಳನ್ನು ಅನುಸರಿಸಿದರೆ ಹೆಚ್ಚಿನ ಆದಾಯ ಪಡೆಯುವ ಜತೆಗೆ ಸಮಯದ ಉಳಿತಾಯವೂ ಆಗುತ್ತದೆ ಎಂದು ತಿಳಿಸಿದರು.

ಬಮೂಲ್ ಶಿಬಿರ ಕಚೇರಿಯ ಅಧಿಕಾರಿಗಳು, ಎಂಪಿಸಿಎಸ್ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !