ಸೇತುವೆ ಕಾಮಗಾರಿ ಪರಿಶೀಲನೆ

7

ಸೇತುವೆ ಕಾಮಗಾರಿ ಪರಿಶೀಲನೆ

Published:
Updated:
Deccan Herald

ಕನಕಪುರ: ಬೆಂಗಳೂರು ರಸ್ತೆಯಲ್ಲಿ ಅರ್ಕಾವತಿ ನದಿಗೆ ನೂತನವಾಗಿ ನಿರ್ಮಾಣವಾಗಿರುವ ಸೇತುವೆ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಮಗಾರಿ ಉತ್ತಮವಾಗಿ ಮಾಡಲಾಗಿದೆ. ಬಹುತೇಕ ಕೆಲಸ ಮುಕ್ತಾಯಗೊಂಡಿದ್ದು, ಅದರ ವೀಕ್ಷಣೆಗೆ ಬಂದಿದ್ದೇನೆ’ ಎಂದರು.

ಶೀಘ್ರದಲ್ಲಿಯೇ ಸೇತುವೆಯನ್ನು ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದು ತಿಳಿಸಿದರು.

ಪಕ್ಕದಲ್ಲೇ ಇರುವ ಹಳೆಯ ಸೇತುವೆಯನ್ನು ಯಾವ ರೀತಿ ಬಳಕೆ ಮಾಡಬಹುದೆಂಬುದನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸೇತುವೆ ಜತೆಗೆ ದೇಗುಲಮಠ ಮತ್ತು ಮಳಗಾಳು ಬಳಿ ಹೊಸ ಸೇತುವೆಗಳನ್ನು ನಿರ್ಮಾಣ ಮಾಡಬೇಕಿದ್ದು ಬೆಂಗಳೂರು ರಸ್ತೆ ಅರ್ಕಾವತಿ ಸೇತುವೆ ಉದ್ಘಾಟನೆಗೊಂಡ ನಂತರ ಆ ಸೇತುವೆಗಳ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ ಎಂದರು.

ಮುಖಂಡರಾದ ಕೆ.ಎನ್‌.ದಿಲೀಪ್‌, ಮಳಗಾಳು ಮಂಜುನಾಥ್‌, ಬಸವರಾಜು, ತಿಮ್ಮಪ್ಪ, ರವೀಂದ್ರ (ಪಪ್ಪಿ), ಪುಟ್ಟಸ್ವಾಮಿ, ವಿಜಯಕುಮಾರ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !