ಬುಧವಾರ, ಸೆಪ್ಟೆಂಬರ್ 18, 2019
25 °C

ಮೋದಿ ವಿದೇಶದ ಪ್ರಧಾನಿ: ಎಂ.ಬಿ.ಪಾಟೀಲ ವಾಗ್ದಾಳಿ

Published:
Updated:

ವಿಜಯಪುರ: 'ಪ್ರಧಾನಿ ನರೇಂದ್ರ ಮೋದಿ ವಿದೇಶದ ಪ್ರಧಾನಿಯಾಗಿದ್ದಾರೆ. ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಮೋದಿಗೆ ಗೊತ್ತಿಲ್ಲ' ಎಂದು ಶಾಸಕ ಎಂ.ಬಿ.ಪಾಟೀಲ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ತಿಕೋಟಾದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಮೋದಿಗೆ ಗೊತ್ತಿಲ್ಲ. ಅವರೊಬ್ಬ ಗ್ರೇಟ್ ಶೋಮ್ಯಾನ್' ಎಂದು ಕುಟುಕಿದರು.

'ಮಾಜಿ ಸ್ಪೀಕರ್ ಕೆ.ಆರ್.ರಮೇಶಕುಮಾರ್ ಅವರ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಬೇಕು. ಅಂದಾಗ ಮಾತ್ರ ಶಾಸಕರು ಪಕ್ಷಾಂತರ ಮಾಡುವುದಿಲ್ಲ. ಉಪ ಚುನಾವಣೆ ನಡೆದರೆ ಜನರಿಗೆ ಹೊರೆಯಾಗುತ್ತದೆ. ಜನರ ದುಡ್ಡಿನಲ್ಲಿ ಚುನಾವಣೆ ನಡೆಯುತ್ತದೆಯೇ ಹೊರತು, ಅನರ್ಹ ಶಾಸಕರ ದುಡ್ಡಿನಲ್ಲಿ ಅಲ್ಲ' ಎಂದು ಅನರ್ಹ ಶಾಸಕರ ಕುರಿತ ಪ್ರಶ್ನೆಗೆ ಉತ್ತರಿಸಿದರು.

Post Comments (+)