ಭಾನುವಾರ, ಜನವರಿ 19, 2020
27 °C

ರಾಜಕೀಯ ಸಾಕು, ನಿವೃತ್ತಿ ಯೋಚನೆ: ಜಿಗಜಿಣಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಿಜಯಪುರ: ‘45 ವರ್ಷ ಗೌರವಯುತವಾಗಿ ರಾಜಕೀಯ ಮಾಡಿರುವ ಸಂತೃಪ್ತಿ ಇದೆ. ಗೌರವವಾಗಿಯೇ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ’ ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕರಾಗಿ ಹೇಳಿದರು.

‘ನನ್ನ ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕೆಲಸವೊಂದು ಬಾಕಿ ಇದೆ. ಅದನ್ನು ಆದಷ್ಟು ಶೀಘ್ರ ಮುಗಿಸಿದರೆ, ನನ್ನ ಎಲ್ಲ ಕೆಲಸಗಳೂ ಪೂರ್ಣವಾದಂತಾಗುತ್ತವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜೆ.ಎಚ್‌.ಪಟೇಲ್, ರಾಮಕೃಷ್ಣ ಹೆಗಡೆ ಅವರ ತತ್ವ ಸಿದ್ಧಾಂತಗಳಂತೆ ರಾಜಕೀಯ ಮಾಡಿ, ಅಧಿಕಾರವನ್ನು ಅನುಭವಿಸಿದ್ದೇನೆ. ಸಚಿವ ಸ್ಥಾನ ನೀಡದಿರುವ ಬಗ್ಗೆ ಎಳ್ಳಷ್ಟೂ ಬೇಸರವಿಲ್ಲ. ನನ್ನನ್ನು ಯಾರೂ ಪಕ್ಷದಲ್ಲಿ ಜೀತಕ್ಕೆ ಇಟ್ಟುಕೊಂಡಿಲ್ಲ. ಇನ್ನು ಮುಂದೆ ರಾಜಕೀಯ ಸಾಕು ಎನಿಸುತ್ತಿದೆ. ಸೋತು ಸಾರ್ವಜನಿಕರಿಂದ ಛೀ.. ಥೂ ಅಂತ ಉಗಿಸಿಕೊಳ್ಳುವುದು ಬೇಡ ಅಂತ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದರು.

ಭಾವುಕರಾದ ಜಿಗಜಿಣಗಿ:

ಕೃಷಿ ಮೇಳದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಜಿಗಜಿಣಗಿ ಅಣ್ಣಾವರು ನನ್ನ ರಾಜಕೀಯ ಗುರು. ನಾನು ಅಂಬೆಗಾಲು ಇಡಲು ಆರಂಭಿಸಿದ ದಿನದಿಂದ ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ’ ಎಂದು ಹೇಳಿದಾಗ, ಜಿಗಜಿಣಗಿ ಕ್ಷಣ ಹೊತ್ತು ಭಾವುಕರಾದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು