ಅಕ್ರಮ ಸಾಗಾಣಿಕೆ: ₹ 55 ಸಾವಿರ ಮೌಲ್ಯ ಮದ್ಯ ವಶ

7
ಜಿಲ್ಲಾ ಅಪರಾಧ ಪತ್ತೆ ವಿಭಾಗ (ಡಿಸಿಐಬಿ) ಪೊಲೀಸರ ಕಾರ್ಯಾಚರಣೆ

ಅಕ್ರಮ ಸಾಗಾಣಿಕೆ: ₹ 55 ಸಾವಿರ ಮೌಲ್ಯ ಮದ್ಯ ವಶ

Published:
Updated:

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಬಳಿ ಅಕ್ರಮ ಮದ್ಯ ಸಾಗಾಣಿಕೆ ಜಾಲವೊಂದರ ಮೇಲೆ ದಾಳಿ ನಡೆಸಿದ ಜಿಲ್ಲಾ ಅಪರಾಧ ಪತ್ತೆ ವಿಭಾಗ (ಡಿಸಿಐಬಿ) ಪೊಲೀಸರು ನಂಜುಂಡಾರಾಧ್ಯ ಎಂಬಾತನನ್ನು ಬಂಧಿಸಿ, ₹ 55 ಸಾವಿರ ಮೌಲ್ಯದ 1 ಸಾವಿರ ಪ್ಯಾಕೆಟ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಘಟನೆ?

ರಾವಂದೂರು ಗ್ರಾಮದ ಬಳಿ ಇರುವ ಬಾರ್ ಮತ್ತು ರೆಸ್ಟೋರೆಂಟ್‌ ಒಂದರಿಂದ ಮದ್ಯವನ್ನು ಹಳ್ಳಿಗಳಲ್ಲಿರುವ ಅಂಗಡಿಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿದ ಡಿಸಿಐಬಿ ಪೊಲೀಸ್ ತಂಡ, ಹಲವು ದಿನಗಳ ಕಾಲ ಇಲ್ಲಿ ಹೊಂಚು ಹಾಕಿ ಕುಳಿತಿತ್ತು. ಇವರಿಗೆ ಬುಧವಾರ ರಾತ್ರಿ 11.30ರ ಹೊತ್ತಿಗೆ ಬೈಕ್‌ನಲ್ಲಿ ಮದ್ಯದ ಪ್ಯಾಕೆಟ್‌ ಸಾಗಿಸುತ್ತಿರುವುದು ಕಂಡು ಬಂತು. ತಕ್ಷಣ ಎಚ್ಚೆತ್ತ ಪೊಲೀಸರು ಬೈಕ್‌ ಬೆನ್ನತ್ತಿ ಹಿಡಿದು ಮದ್ಯವನ್ನು ವಶಪಡಿಸಿಕೊಂಡು, ಸಾಗಿಸುತ್ತಿದ್ದ ನಂಜುಂಡಾರಾಧ್ಯ ಎಂಬಾತನನ್ನು ಬಂಧಿಸಿದರು. ಮತ್ತೊಬ್ಬ ಆರೋಪಿ ವಿಜಯ್ ಪರಾರಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಡಿಸಿಐಬಿ ಇನ್‌ಸ್ಪೆಕ್ಟರ್ ಕಾಂತರಾಜು, ಹೆಡ್‌ಕಾನ್‌ಸ್ಟೆಬಲ್ ಸಂದೀಪ, ಸಿಬ್ಬಂದಿ ಸುನೀಲ್ ಹಾಗೂ ರಾಂಪ್ರಸಾದ್ ಇದ್ದರು. ಪ್ರಕರಣ ಪಿರಿಯಾಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !