10 ಮಂದಿ ಕೈದಿಗಳ ಬಿಡುಗಡೆ

7

10 ಮಂದಿ ಕೈದಿಗಳ ಬಿಡುಗಡೆ

Published:
Updated:

ಮೈಸೂರು: ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಅಂಗವಾಗಿ ಇಲ್ಲಿನ ಕೇಂದ್ರ ಕಾರಾಗೃಹದಿಂದ ಸನ್ನಡತೆಯಲ್ಲಿದ್ದ 10 ಮಂದಿಯನ್ನು ಶುಕ್ರವಾರ ಜಿಲ್ಲಾ ಮತ್ತು ಪ್ರಧಾನ ಸೆಷೆನ್ಸ್ ನ್ಯಾಯಾಧೀಶ ಎಸ್‌.ಕೆ.ವಂಟಿಗೋಡಿ ಬಿಡುಗಡೆ ಮಾಡಿದರು.

ಹಾಸನದ ಅರಕಲಗೂಡಿನ ವಡ್ಡರಹಳ್ಳಿಯ ಈರಪ್ಪ, ಅರಕಲಗೂಡಿನ ನೆಲಮನೆಯ ತಿಮ್ಮೇಗೌಡ, ಸೋಮವಾರಪೇಟೆಯ ಮಣಸೆ ಗ್ರಾಮದ ನಾಗರಾಜು, ನಂಜನಗೂಡಿನ ಚಾಮಲಾಪುರದ ಚಂದ್ರಶೇಖರ, ವಿರಾಜಪೇಟೆಯ ಶಿವಕುಮಾರ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಚಿನ್ನಪ್ಪ, ಇದೇ ಗ್ರಾಮದ ಅಣ್ಣಪ್ಪ, ಇಲವಾಲದ ಶಿವಲಿಂಗ, ಬೇಲೂರಿನ ರಾಜು ಹಾಗೂ ತಮಿಳುನಾಡಿನ ದೇವರಾಜು ಬಿಡುಗಡೆ ಹೊಂದಿದವರು.

ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಕೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅಂದು ಸಾಧ್ಯವಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !