ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ನಿಮಿಷದ ಗಾಳಿಗೆ ಮಲಗಿದ ಬಾಳೆ

ನಂಜನಗೂಡು ತಾಲ್ಲೂಕಿನ ಶಿರಮಹಳ್ಳಿಯಲ್ಲಿ ಅಪಾರ ನಷ್ಟ
Last Updated 7 ಜೂನ್ 2019, 19:39 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ 100ಕ್ಕೂ ಅಧಿಕ ಎಕರೆ ಬಾಳೆತೋಟ ನಾಶವಾಗಿದೆ. ಸುಮಾರು 15 ನಿಮಿಷಗಳಷ್ಟು ಕಾಲ ಬೀಸಿದ ಗಾಳಿಯು ತೋಟದಲ್ಲಿರುವ ಬಾಳೆಗಿಡಗಳನ್ನು ಮಕಾಡೆ ಮಲಗಿಸಿತು. ಇನ್ನೇನು ಕಟಾವಿಗೆ ಬರಲಿದ್ದ ಬಾಳೆಗೊನೆಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.

ಅತ್ಯಂತ ಹೆಚ್ಚಿನ ನಷ್ಟ ಹುಲ್ಲಹಳ್ಳಿ ಸಮೀಪದ ಶಿರಮಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಇಲ್ಲಿ ಬಹುತೇಕ ಮಂದಿ ಬಾಳೆಯನ್ನೇ ಬೆಳೆದಿದ್ದರು. 15 ದಿನಗಳು ಕಳೆದಿದ್ದರೆ ಬಾಳೆಗೊನೆಗಳು ಕಟಾವಿಗೆ ಬರುತ್ತಿದ್ದವು. ಆದರೆ, ಬೀಸಿದ ಬಿರುಗಾಳಿ ಎಲ್ಲವನ್ನೂ ಆಪೋಶನ ತೆಗೆದುಕೊಂಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮದ ರೈತ ಕಾರ್ತೀಕ್, ‘ನಿಜಕ್ಕೂ ನಮ್ಮ ಪಾಲಿಗೆ ಇದೊಂದು ದೊಡ್ಡ ದುರಂತ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT