ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: 2 ಹುಲಿ, 1 ಆನೆ ಸಾವು

Last Updated 24 ನವೆಂಬರ್ 2018, 8:54 IST
ಅಕ್ಷರ ಗಾತ್ರ

ಮೈಸೂರು/ಹುಣಸೂರು/ಗುಂಡ್ಲುಪೇಟೆ: ಒಂದೇ ದಿನ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಹುಲಿ ಹಾಗೂ ಆನೆ ಮೃತದೇಹ ಸಿಕ್ಕಿದೆ.

ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಕಳೆದೆರಡು ದಿನಗಳಿಂದ ರೈತರಲ್ಲಿ ಆತಂಕ ಸೃಷ್ಟಿಸಿದ್ದ ಗಂಡು ಹುಲಿಯ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ನಾಗರಹೊಳೆ ಕಲ್ಲಹಳ್ಳ ವಲಯದ ಮೂರ್ಕಲ್‌ ಬೀಟ್‌ನಲ್ಲಿ 10 ವರ್ಷ ವಯಸ್ಸಿನ ಗಂಡು ಹುಲಿಯ ಮೃತದೇಹ ಸಿಕ್ಕಿದೆ. ದಟ್ಟ ಕಾಡಿನ ನಡುವೆ ಗಂಡಾನೆ ಶವ ದೊರೆತಿದೆ.

ಗೋಪಾಲಸ್ವಾಮಿ ಬೆಟ್ಟ ವಲಯದ ಸೋಮೇಶ್ವರ ದೇವಸ್ಥಾನದ ಬಳಿ ಪತ್ತೆಯಾಗಿರುವ ಶವವು ಆತಂಕ ಸೃಷ್ಟಿಸಿದ್ದ ಹುಲಿಯದ್ದೇ ಇರಬಹುದು ಎಂದು ಶಂಕಿಸಲಾಗಿದೆ. 10ರಿಂದ 12 ವರ್ಷ ವಯಸ್ಸಾಗಿದ್ದು, ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಹೊಳೆ ಮೂರ್ಕಲ್‌ ಬೀಟ್‌ನಲ್ಲಿ ಪತ್ತೆಯಾಗಿರುವ ಹುಲಿಯ ಮೃತದೇಹದಲ್ಲಿ ಯಾವುದೇ ಆಹಾರ ಇರಲಿಲ್ಲ. ಸುಮಾರು 10 ವರ್ಷ ವಯಸ್ಸಿನದು ಎಂದು ಅಂದಾಜು ಮಾಡಲಾಗಿದೆ. ಮುಖ, ದೇಹದ ಅಲ್ಲಲ್ಲಿ ಗಾಯಗಳಾಗಿವೆ. ಬೇರೊಂದು ಹುಲಿ ಜತೆಗೆ ಕಾದಾಟ ನಡೆಸಿ ಗಾಯಗೊಂಡ ನಂತರ ಆಹಾರ ಸೇವಿಸಲಾಗದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಆನೆಯ ಶವ ಪತ್ತೆ: ನಾಗರಹೊಳೆ ಕಲ್ಲಹಳ್ಳ ವಲಯದ ಕೊಳಂಗೆರೆ ಬೀಟ್ ಬಳಿ ದಟ್ಟ ಕಾಡಿನ ನಡುವೆ 30ರಿಂದ 35 ವರ್ಷ ವಯಸ್ಸಿನ ಗಂಡಾನೆ ಮೃತದೇಹ ಸಿಕ್ಕಿದೆ. ಮತ್ತೊಂದು ಆನೆಯೊಂದಿಗೆ ಕಾದಾಟ ನಡೆಸಿರುವ ಕುರುಹುಗಳು ಸ್ಥಳದಲ್ಲಿ ಕಂಡು ಬಂದಿವೆ. ಇದರ ಗುದದ್ವಾರ, ಹೊಟ್ಟೆ ಭಾಗಕ್ಕೆ ಮತ್ತೊಂದು ಆನೆ ತಿವಿದು ಗಾಯಗೊಳಿಸಿದೆ.

ಸಿಕ್ಕಿರುವ ಹುಲಿ, ಆನೆ ಮೃತದೇಹಗಳ ಎಲ್ಲ ಭಾಗಗಳೂ ಲಭ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT