ರಾಜ್ಯಮಟ್ಟದ ಪ್ರತಿಭಾ ಕಾರಂಜಿ: 34 ಶೈಕ್ಷಣಿಕ ಜಿಲ್ಲೆ; 1,730 ವಿದ್ಯಾರ್ಥಿಗಳು

7
ಸಾಂಸ್ಕೃತಿಕ ನಗರಿಯಲ್ಲಿ 15ರಿಂದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ

ರಾಜ್ಯಮಟ್ಟದ ಪ್ರತಿಭಾ ಕಾರಂಜಿ: 34 ಶೈಕ್ಷಣಿಕ ಜಿಲ್ಲೆ; 1,730 ವಿದ್ಯಾರ್ಥಿಗಳು

Published:
Updated:

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಡಿ.15ರಿಂದ 17ವರೆಗೆ ವಿದ್ಯಾರ್ಥಿಗಳ ಕಲರವ. ಏಕೆಂದರೆ ಈ ಬಾರಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಆಯೋಜಿಸಲು ಮೈಸೂರಿಗೆ ಅವಕಾಶ ಲಭಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ ಮೂರು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 34 ಶೈಕ್ಷಣಿಕ ಜಿಲ್ಲೆಗಳ 1,730 ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.

‘15ರಂದು ಬೆಳಿಗ್ಗೆ 11ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು 8ರಿಂದ 10ನೇ ತರಗತಿ ಹಾಗೂ ಕಲೋತ್ಸವ ಸ್ಪರ್ಧೆಗಳನ್ನು 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ 51 ವಿದ್ಯಾರ್ಥಿಗಳು ಬರಲಿದ್ದಾರೆ. ಪ್ರತಿಭಾ ಕಾರಂಜಿಯಲ್ಲಿ (ವೈಯಕ್ತಿಕ) 21 ವಿಭಾಗ ಮತ್ತು ಕಲೋತ್ಸವದಲ್ಲಿ (ಸಾಮೂಹಿಕ) ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ತೀರ್ಪುಗಾರರಿಗೆ ಸ್ಪರ್ಧಿಗಳ ಹೆಸರು, ಜಿಲ್ಲೆ ತಿಳಿಯದಂತೆ ಗೋಪ್ಯತೆ ಕಾಪಾಡಲಾಗುವುದು. ಏಕೆಂದರೆ ಹಿಂದೆ ಈ ಸಂಬಂಧ ವಿವಾದ ಸೃಷ್ಟಿಯಾಗಿದೆ. ಹೀಗಾಗಿ, ಸ್ಪರ್ಧಿಗಳಿಗೆ ಪ್ರತ್ಯೇಕ ಕೋಡ್ ನೀಡಲಾಗಿದೆ. ತೀರ್ಪು ನೀಡಲು ತಜ್ಞರು, ನುರಿತ ಕಲಾವಿದರು, ಬೋಧಕರನ್ನು ನಿಯೋಜಿಸಲಾಗಿದೆ’ ಎಂದರು.

ವೈಯಕ್ತಿಕ ಸ್ಪರ್ಧೆಗಳು: ಪ್ರತಿಭಾ ಕಾರಂಜಿಯಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಉರ್ದು, ಮರಾಠಿ, ತೆಲುಗು, ತಮಿಳು, ತುಳು, ಕೊಂಕಣಿ ಭಾಷೆಗಳಲ್ಲಿ ಭಾಷಣ ಸ್ಪರ್ಧೆ. ಧಾರ್ಮಿಕ ಪಠಣ (ಸಂಸ್ಕೃತ ಮತ್ತು ಅರೇಬಿಕ್). ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಛದ್ಮವೇಷ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಮಿಮಿಕ್ರಿ, ಚರ್ಚಾ ಸ್ಪರ್ಧೆ, ರಂಗೋಲಿ, ಗಝಲ್ ಸ್ಪರ್ಧೆಗಳು ಹಾಗೂ ಕಲೋತ್ಸವ ವಿಭಾಗದಲ್ಲಿ ನೃತ್ಯ, ಸಂಗೀತ, ನಾಟಕ, ದೃಶ್ಯಕಲೆ ಸ್ಪರ್ಧೆಗಳು ನಡೆಯಲಿವೆ.

‘ವಾಸ್ತವ್ಯಕ್ಕೆ ಬಾಲಕಿಯರಿಗೆ ಹಾಗೂ ಬಾಲಕರಿಗೆ 13 ಕೇಂದ್ರಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಸಂಚಾರಕ್ಕೆಂದು 15 ವಾಹನ ನಿಗದಿಪಡಿಸಲಾಗಿದೆ. ಮೂರು ಹೊತ್ತು ಊಟ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು. ವಿವಿಧ ಸ್ಪರ್ಧೆಗಳಲ್ಲಿ ಗೆಲ್ಲುವ ವಿದ್ಯಾರ್ಥಿಗಳಿಗೆ ಬಹುಮಾನ ಹಣವನ್ನು ಅವರ ಖಾತೆಗೆ ಹಾಕಲಾಗುವುದು’ ಎಂದು ಡಿಡಿಪಿಐ ಎಸ್‌.ಮಮತಾ ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಇದ್ದರು.

 

ವಿಜೇತರಿಗೆ ಸಿಗಲಿರುವ ನಗದು ಬಹುಮಾನ (₹ ಗಳಲ್ಲಿ)

ಸ್ಥಾನ; ಪ್ರತಿಭಾ ಕಾರಂಜಿ (ವೈಯಕ್ತಿಕ); ಕಲೋತ್ಸವ (ಸಮೂಹ)

ಪ್ರಥಮ; 10,000; 60,000

ದ್ವಿತೀಯ; 5,000; 30,000

ತೃತೀಯ; 3,000; 18,000

**

ಭಾಗವಹಿಸುವವರ ಸಂಖ್ಯೆ

* ಸ್ಪರ್ಧಿಗಳು: 1,730

* ನೋಡಲ್‌ ಅಧಿಕಾರಿಗಳು, ಶಿಕ್ಷಕರು: 170

* ತೀರ್ಪುಗಾರರು: 75

* ವಿವಿಧ ಸಮಿತಿ ಸದಸ್ಯರು: 300

* ಸ್ವಯಂಸೇವಕರು: 200

* ಆಹ್ವಾನಿತರು: 350

* ಇತರೆ: 175

* ಒಟ್ಟು: 3,000

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !