ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 6 ಕೋಟಿ ಮೌಲ್ಯದ ನಿವೇಶನ ವಶಕ್ಕೆ ಪಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

Last Updated 21 ಆಗಸ್ಟ್ 2020, 7:10 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ತಾಲ್ಲೂಕಿನ ಕಸಬಾ ಹೋಬಳಿಯ ಹೆಬ್ಬಾಳು ಗ್ರಾಮದ ಸರ್ವೆ ನಂಬರ್‌ 273/2ರ 27 ಗುಂಟೆ ವಿಸ್ತೀರ್ಣದಲ್ಲಿ ಅನುಮತಿ ಇಲ್ಲದೆ 10 ವಿವಿಧ ಅಳತೆಯ ನಿವೇಶನಗಳನ್ನು ರಚಿಸಿ, ಹಂಚಿಕೆ ಮಾಡಲಾಗಿದ್ದ ₹ 6 ಕೋಟಿ ಮೌಲ್ಯದ ನಿವೇಶನವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದೆ.

ಹೆಬ್ಬಾಳು ಗ್ರಾಮದ ಸರ್ವೆ ನಂಬರ್‌ 228, 229/1, 229/3, 231/2, 232 ಹಾಗೂ 273/2ರಲ್ಲಿ ವಾಣಿವಿಲಾಸ ಗೃಹ ನಿರ್ಮಾಣ ಸಹಕಾರ ಸಂಘದವರು ರಚಿಸಿರುವ ಬಡಾವಣೆಯಲ್ಲಿ ಲ್ಯಾಂಡ್ ಬ್ಯಾಂಕ್‍ಗಾಗಿ ಕಾಯ್ದಿರಿಸಿರುವ ಸರ್ವೆ ನಂಬರ್‌ 273/2ರ 27 ಗುಂಟೆ ವಿಸ್ತೀರ್ಣದಲ್ಲಿ ಯಾವುದೇ ಅನುಮತಿಯಿಲ್ಲದೆ, ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಲಾಗಿತ್ತು.

ಮುಡಾ ಆಯುಕ್ತರ ನಿರ್ದೇಶನದ ಮೇರೆಗೆ ₹ 6 ಕೋಟಿ ಮೌಲ್ಯದ ನಿವೇಶನವನ್ನು ವಶಕ್ಕೆ ಪಡೆದು, ನಾಮಫಲಕವನ್ನು ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ವಲಯ ಅಧಿಕಾರಿ ಎಚ್.ಪಿ.ಶಿವಣ್ಣ, ಸಹಾಯಕ ಎಂಜಿನಿಯರ್‌ ನಾಗರಾಜು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT