ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾ.ರಾ.ಮಹೇಶ್‌ ನಡವಳಿಕೆ ಬದಲಿಸಿಕೊಳ್ಳಲಿ: ಎಚ್ ವಿಶ್ವನಾಥ್.

Last Updated 2 ಜೂನ್ 2019, 9:47 IST
ಅಕ್ಷರ ಗಾತ್ರ

ಹುಣಸೂರು: ‘ಸಚಿವ ಸಾ.ರಾ.ಮಹೇಶ್‌ ಅವರ ನಡವಳಿಕೆ ರಾಜ್ಯಸರ್ಕಾರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಆದ್ದರಿಂದ ತಮ್ಮ ನಡವಳಿಕೆ ಬದಲಿಸಿಕೊಳ್ಳುವ ಅಗತ್ಯವಿದೆ. ಏಕೆಂದರೆ ಹಣ, ಅಹಂಕಾರದಿಂದ ಏನನ್ನು ಗಳಿಸಲು ಸಾಧ್ಯವಿಲ್ಲ ಎಂಬುದು ಈ ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದೆ.ಮತ್ತೊಮ್ಮೆ ಅದೇ ದಾರಿಯಲ್ಲಿ ಹೋದರೆ ಜನತಂತ್ರ ವ್ಯವಸ್ಥೆಯಲ್ಲಿ ಪಾಠ ಕಲಿಯಬೇಕಾಗುತ್ತದೆ’ ಎಂದು ಅಧ್ಯಕ್ಷ ಅಡಗೂರು ಎಚ್. ವಿಶ್ವನಾಥ್‌ ಗುಡುಗಿದರು.

ನಗರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿ, ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ರಾಜ್ಯದಲ್ಲಿ ಜೆಡಿಎಸ್ ತನ್ನ ಸಾಮರ್ಥ್ಯ ಉಳಿಸಿಕೊಂಡಿದ್ದರೂ ಕೆ.ಆರ್‌.ನಗರ ಶಾಸಕರ ದುರಹಂಕಾರದಿಂದ ಮುಗ್ಗರಿಸಿರುವುದು ನೋವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾ.ರಾ.ಮಹೇಶ್‌ ಅವರ ಉದ್ಘಟತನದಿಂದ ಕೆ.ಆರ್.ನಗರ ಕ್ಷೇತ್ರದಲ್ಲಿ ಜೆಡಿಎಸ್‌ ನೆಲಕಚ್ಚಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುರುಬ ಸಮಾಜವನ್ನು ಕಡೆಗಣಿಸಿದ್ದಾರೆ. ಇಲ್ಲಿ ತಿರಸ್ಕೃತಗೊಂಡವರು ಕಾಂಗ್ರೆಸ್‌ ನಿಂದ ಟಿಕೆಟ್ ಪಡೆದು ಗೆದ್ದಿದ್ದಾರೆ. ಇದಕ್ಕೆ ಕ್ಷೇತ್ರದ ಶಾಸಕರು ಉತ್ತರಿಸಬೇಕಿದೆ’ ಎಂದರು.

ಕೆ.ಆರ್‌.ನಗರ ಪುರಸಭೆಗೆ ಆಯ್ಕೆಗೊಂಡ ಎಲ್ಲ ಪಕ್ಷದ ಸದಸ್ಯರನ್ನು ಚಹಾ ಕೂಟಕ್ಕೆ ಆಹ್ವಾನಿಸಿದ್ದೆ. ಇದು ಸಂಪ್ರದಾಯ. ಅದೇ ರೀತಿ ಶನಿವಾರ ಚಹಾ ಕೂಟಕ್ಕೆ ಬಂದ ಕೆಲವರು ಕುರುಬ ಸಮಾಜಕ್ಕೆ ಜೆಡಿಎಸ್‌ ಟಿಕೇಟ್ ನೀಡದ ಬಗ್ಗೆ ಪ್ರಸ್ತಾಪಿಸಿದರು. ಆದ್ದರಿಂದ ಆಂತರಿಕವಾಗಿ ನಡೆದ ಸಂಗತಿಯನ್ನು ಹೊರ ಹಾಕಬೇಕಾಯಿತು ಎಂದು ಉತ್ತಿರಿಸಿದರು.

ಈ ಹಿಂದೆ ಕುರುಬ ಸಮಾಜ ಕಾಂಗ್ರೆಸ್‌ ಹೊರತುಪಡಿಸಿ, ಉಳಿದ ಪಕ್ಷಗಳಿಗೆ ಮತ ನೀಡುವ ಪರಂಪರೆ ಇತ್ತು. ಆದರೆ ಸಾ.ರಾ.ಮಹೇಶ್‌ ಅವರು ಜೆಡಿಎಸ್‌ಗೆ ಸೇರಿದ ನಂತರ ಕುರುಬ ಸಮಾಜದ ಮತಗಳು ಜೆಡಿಎಸ್ ಬತ್ತಳಿಕೆಗೆ ಬಂದಿವೆ ಎಂಬುದನ್ನು ಮರೆಯದಿರಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT