ಗುರುವಾರ , ಡಿಸೆಂಬರ್ 5, 2019
24 °C

ಅಭಿಷೇಕ್‌ ಕುಟುಂಬ ಗುರುವಾರ ಅಮೆರಿಕಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಮೆರಿಕದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟ ಅಭಿಷೇಕ್ ಭಟ್‌ ಕುಟುಂಬದವರು, ಡಿ. 5ರಂದು ಅಮೆರಿಕಕ್ಕೆ ತೆರಳಲಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಭಿಷೇಕ್ ತಂದೆ ಸುದೇಶ್‌ ಚಂದ್ ಭಟ್‌, ‘ಬುಧವಾರ ವೀಸಾ ಸಿಗಲಿದ್ದು, ನನ್ನ ಸಹೋದರರಿಬ್ಬರು ನಮ್ಮೊಂದಿಗೆ ಬರಲಿದ್ದಾರೆ. ಗುರುವಾರ, ಬೆಂಗಳೂರಿನಿಂದ ಲಾಸ್‌ಎಂಜಲೀಸ್‌ಗೆ ವಿಮಾನದ ಮೂಲಕ ತೆರಳಿ, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಸ್ಯಾನ್ ಬರ್ನಾರ್ಡಿನೊಗೆ ಹೊರಡಲಾಗುವುದು. ಅಲ್ಲಿಯೇ ಅಭಿಷೇಕ್‌ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ’ ಎಂದು ಹೇಳಿದರು.

‘ಗುಂಡು ಹಾರಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ತೋರಿಸಿದ ಬಳಿಕವೇ ಆರೋಪಿ ಎರಿಕ್ ಡೆವೊನ್ ಟರ್ನರ್‌ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಕೊಲೆಗೆ ಕಾರಣವನ್ನು ಬಹಿರಂಗಪಡಿಸಿಲ್ಲ’ ಎಂದು ಅವರು ತಿಳಿಸಿದರು.

ಅಭಿಷೇಕ್ ಕುಟುಂಬದ ನೆರವಿಗಾಗಿ ಆರಂಭಿಸಿರುವ ಆನ್‌ಲೈನ್‌ ದೇಣಿಗೆ ಸಂಗ್ರಹ ಕಾರ್ಯ ಮುಂದುವರಿದಿದ್ದು, ₹ 48 ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು