ಶುಕ್ರವಾರ, ಜುಲೈ 30, 2021
23 °C

ಅತ್ಯಾಚಾರ ಸಂತ್ರಸ್ತೆಯಿಂದ ಲಂಚ: ಎಸಿಬಿ ಬಲೆಗೆ ಇನ್‌ಸ್ಪೆಕ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅತ್ಯಾಚಾರ ಸಂತ್ರಸ್ತೆಯೊಬ್ಬರಿಂದ ಇಲ್ಲಿನ ಮೇಟಗಳ್ಳಿ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಮತ್ತು ಕಾನ್‌ಸ್ಟೆಬಲ್ ಭೀಮಣ್ಣ ₹ 75 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಸತಿ ಗೃಹವೊಂದರಲ್ಲಿ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

‘ಅತ್ಯಾಚಾರ ನಡೆಸಿದ್ದ ಆರೋಪಿಯನ್ನು ಬಂಧಿಸಲು ಮೊದಲಿಗೆ ಇನ್‌ಸ್ಪೆಕ್ಟರ್ ರಾಘವೇಂದ್ರ ₹ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ ಹಣ ನೀಡಲಿಲ್ಲ. ನಂತರ, ಆರೋಪಿಯು ಜಾಮೀನು ತೆಗೆದುಕೊಂಡ. ದೋಷಾರೋಪ ಪಟ್ಟಿಯಲ್ಲಿ ಕಠಿಣವಾದ ಸೆಕ್ಷನ್‌ಗಳನ್ನು ಹಾಕಬೇಕಾದರೆ, ಜಾಮೀನು ರದ್ದುಗೊಳಿಸಬೇಕಾದರೆ ಹಣ ನೀಡಲೇಬೇಕು ಎಂದು ರಾಘವೇಂದ್ರ, ಕಾನ್‌ಸ್ಟೆಬಲ್ ಭೀಮಣ್ಣ ಮೂಲಕ ಬೇಡಿಕೆ ಇಟ್ಟಿದ್ದಾರೆ. ಈ ಹಂತದಲ್ಲಿ ಸಂತ್ರಸ್ತೆಯ ಸೋದರ ಎಸಿಬಿ ಗಮನಕ್ಕೆ ವಿಷಯ ತಂದಿದ್ದಾರೆ. ನಗರದ ಹೊರವಲಯದ ವಸತಿ ಗೃಹವೊಂದರಲ್ಲಿ ₹ 75 ಸಾವಿರ ನೀಡುವಾಗ ಬಂಧಿಸಲಾಯಿತು’ ಎಂದು ಎಸಿಬಿ ಎಸ್‌.ಪಿ.ರಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಸಿಬಿ ಡಿವೈಎಸ್‌ಪಿ ಪರಶುರಾಮಪ್ಪ, ಇನ್‌ಸ್ಪೆಕ್ಟರ್‌ಗಳಾದ ನಿರಂಜನ್ ಮತ್ತು ಕರೀಂ ರಾವ್ಸರ್‌ ನೇತೃತ್ವದಲ್ಲಿ ದಾಳಿ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು