ಸರಕು ಸಾಗಣೆ ಆಟೊ ಮಗುಚಿ ಅಣ್ಣ– ತಂಗಿ ಸಾವು

ಮಂಗಳವಾರ, ಏಪ್ರಿಲ್ 23, 2019
31 °C
ಟಾಟಾ ಏಸ್‌ ವಾಹನದಲ್ಲಿ 28 ಮಂದಿ ಪ್ರಯಾಣ, ಎಲ್ಲರೂ ಕೃಷಿ ಕಾರ್ಮಿಕರು

ಸರಕು ಸಾಗಣೆ ಆಟೊ ಮಗುಚಿ ಅಣ್ಣ– ತಂಗಿ ಸಾವು

Published:
Updated:
Prajavani

ಸರಗೂರು: ತಾಲ್ಲೂಕಿನ ಬಡಗಲಪುರ ಗ್ರಾಮದ ಬಳಿ ಶುಕ್ರವಾರ ಬೆಳಿಗ್ಗೆ ಟಾಟಾ ಏಸ್ ವಾಹನ ಮಗುಚಿ ಇಬ್ಬರು ಕೃಷಿ ಕಾರ್ಮಿಕರು ಮೃತಪಟ್ಟು, ಇತರೆ 26 ಮಂದಿ ಗಾಯಗೊಂಡಿದ್ದಾರೆ.

ಯಶವಂತಪುರ ಗ್ರಾಮದ ದೇವಯ್ಯ (48) ಇವರ ಸೋದರಿ ಕೂಸಮ್ಮ (40) ಮೃತಪಟ್ಟವರು. ಗಾಯಗೊಂಡವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ.

ಘಟನೆ ವಿವರ: ಯಶವಂತಪುರ ಗ್ರಾಮದಿಂದ 30 ಮಂದಿ ಕೃಷಿಕಾರ್ಮಿಕರು ಟಾಟಾ ಏಸ್ ವಾಹನದಲ್ಲಿ ಪುರದಕಟ್ಟೆ ಗ್ರಾಮಕ್ಕೆ ಶುಂಠಿ ಕೆಲಸಕ್ಕಾಗಿ ಹೋಗುತ್ತಿದ್ದರು. ಈ ವೇಳೆ ಬಡಗಲಪುರ ಗ್ರಾಮದ ಬಳಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಇದರಿಂದ ದೇವಯ್ಯ ಮತ್ತು ಅವರ ಸೋದರಿ ಕೂಸಮ್ಮ ಸ್ಥಳದಲ್ಲೇ ಮೃತಪಟ್ಟರು. ದೇವಯ್ಯ ಅವರ ಪುತ್ರಿಯ ಸ್ಥಿತಿ ಸಹ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ 8 ಮಂದಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಎಚ್.ಡಿ.ಕೋಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಯರವ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸ್ಥಳಕ್ಕೆ ಸರಗೂರು ಪೊಲೀಸ್ ಠಾಣೆ ಪಿಎಸ್ಐ ಮೋಹನ್‌ಕುಮಾರ್, ಎಎಸ್ಐ ಮಾದಪ್ಪ, ಕಾನ್‌ಸ್ಟೆಬಲ್ ನಾಗನಾಯಕ, ಕೆಂಡಗಣ್ಣಸ್ವಾಮಿ ಸ್ಥಳಕ್ಕೆ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಸಮೀಪದ ಗ್ರಾಮಸ್ಥರು ಈ ಕಾರ್ಯದಲ್ಲಿ ನೆರವಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !