ಅಪಘಾತ: ಆಫ್ಘಾನಿಸ್ತಾನದ ವಿದ್ಯಾರ್ಥಿ ಸಾವು

7

ಅಪಘಾತ: ಆಫ್ಘಾನಿಸ್ತಾನದ ವಿದ್ಯಾರ್ಥಿ ಸಾವು

Published:
Updated:

ಮೈಸೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆಫ್ಘಾನಿಸ್ತಾನದ ವಿದ್ಯಾರ್ಥಿ ಅಬ್ದುಲ್ ಸಲಾಂ (24) ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಮಾನು ಗೇಟ್‌ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಜೀಯಾವುಲ್ಲಾ ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ.

ಇವರು ಇಲ್ಲಿನ ಮಹಾಜನ ಕಾಲೇಜಿನಲ್ಲಿ ಪ್ರಥಮ ಬಿ.ಎ ಓದುತ್ತಿದ್ದರು. ಸೋಮವಾರ ತಡರಾತ್ರಿ ಮೆಟ್ರೊಪೋಲ್ ವೃತ್ತದಿಂದ ಹುಣಸೂರು ರಸ್ತೆಯಲ್ಲಿ ಇವರು ಬರುತ್ತಿದ್ದಾಗ ಅಪೆ ವಾಹನವೊಂದು ಯಾವುದೇ ಸೂಚನೆ ನೀಡದೇ ಎಡಕ್ಕೆ ತಿರುಗಿದೆ. ಆಗ ಆಯತಪ‍್ಪಿದ ಇವರು ನೇರ ಕಮಾನುಗೇಟ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇಬ್ಬರಿಗೂ ತಲೆಗೆ ತೀವ್ರ ಸ್ವರೂಪದ ಪೆಟ್ಟಾಯಿತು. ಸ್ಥಳದಲ್ಲೇ ಅಬ್ದುಲ್ ಸಲಾಂ ಮೃತಪಟ್ಟರು.

ಇವರ ಪೋಷಕರು ಆಫ್ಘಾನಿಸ್ತಾನದಿಂದ ಇಲ್ಲಿಗೆ ಬರಲು ಕನಿಷ್ಠ 2 ದಿನಗಳಾದರೂ ಹಿಡಿಯುತ್ತವೆ. ಅಲ್ಲಿಯವರೆಗೆ ಕೆ.ಆರ್.ಆಸ್ಪತ್ರೆಯಲ್ಲಿ ಮೃತದೇಹವನ್ನು ರಕ್ಷಿಸಿಡಲಾಗುತ್ತದೆ. ಪೋಷಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !