ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಶಾಶ್ವತ ಸ್ವಚ್ಛತೆಗೆ ಕ್ರಮ: ಮೇಯರ್ ತಸ್ನೀಂ

ಸ್ವಚ್ಛ ಸರ್ವೇಕ್ಷಣಾ ಅಂಕ ಹೆಚ್ಚಿಸಲು ಕರೆ ಮಾಡಿ, ಆ್ಯಪ್‌ ಮೂಲಕ ಪ್ರತಿಕ್ರಿಯಿಸಿ
Last Updated 23 ಜನವರಿ 2020, 14:33 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರವನ್ನು ಸ್ವಚ್ಛ ಸರ್ವೇಕ್ಷಣಾ ವೇಳೆಯಲ್ಲಿ ಮಾತ್ರವಲ್ಲದೆ ಸದಾಕಾಲ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಪ್ರಯತ್ನಿಸುವುದಾಗಿ ಮೇಯರ್ ತಸ್ನೀಂ ತಿಳಿಸಿದರು.

ನಗರದ ಒಳಗಿನ ಮುಖ್ಯ ರಸ್ತೆಗಳಷ್ಟೇ ಒಳ ರಸ್ತೆಗಳ ಸ್ವಚ್ಛತೆಯೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗಾಂಧಿನಗರದ ಒಳರಸ್ತೆಗಳಿಗೆ ಮಂಗಳವಾರ ಸ್ವತಃ ಭೇಟಿ ನೀಡಿ ಸ್ವಚ್ಛತೆಗೆ ಕ್ರಮ ವಹಿಸಿದ್ದೇನೆ. ನವದೆಹಲಿಯಿಂದ ಬಂದಿರುವ ಸರ್ವೇಕ್ಷಣಾ ತಂಡ ಯಾವುದೇ ವಾರ್ಡ್‌ ಅಥವಾ ಪ್ರದೇಶವನ್ನು ಆಯ್ಕೆಗೆ ತೆಗೆದುಕೊಳ್ಳುವುದರಿಂದ ಎಲ್ಲೆಡೆ ಸ್ವಚ್ಛತಗೆ ಆದ್ಯತೆ ನೀಡಲಾಗುವುದು. ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ವಾರ್ಡ್‌ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಬಲ್‌ ಅಳವಡಿಕೆ ಮತ್ತು ಇತರೆ ಕಾಮಗಾರಿಗಾಗಿ ರಸ್ತೆ ಅಗೆಯುವುದಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. ಇನ್ನು ಮುಂದೆ ರಸ್ತೆ ಕಾಮಗಾರಿ ಮುಗಿಯುವ ಮುನ್ನವೇ ನೀರಿನ, ಒಳಚರಂಡಿ ಹಾಗೂ ಇತರೆ ಕೇಬಲ್‌ ಜೋಡಣೆ ಕಾಮಗಾರಿ ಪೂರ್ಣಗೊಳಿಸಲು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

‌‘ನಗರದ ಹೊರ ವಲಯದ ತ್ಯಾಜ್ಯ ಸಮಸ್ಯೆಗೂ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಸ್ವಚ್ಛ ಸರ್ವೇಕ್ಷಣೆ ಸಮಯದಲ್ಲಿ ಮಾತ್ರ ಸ್ವಚ್ಛತೆಗೆ ಹೆಚ್ಚು ಗಮನ ಕೊಡಲಾಗುತ್ತದೆ. ಉಳಿದ ಸಮಯದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ದೂರ ಇದೆ. ಈ ಅಪವಾದವನ್ನು ದೂರ ಮಾಡುವುದೇ ನನ್ನ ಗುರಿಯಾಗಿದೆ’ ಎಂದು ತಿಳಿಸಿದರು.

ನಾನು ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ಇದ್ದಾಗಲೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಬಂದಿದೆ. ಈಗ ನಾನೇ ಮೇಯರ್ ಆಗಿರುವುದರಿಂದ ಪರಿಣಾಮಕಾರಿ ನಗರವನ್ನು ಶಾಶ್ವತ ಸ್ವಚ್ಛನಗರಿಯನ್ನಾಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಹಾಗೂ ಕಸ ಸುಡುವ ಪ್ರದೇಶಗಳಿಗೆ ಪಾಲಿಕೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ದಂಡ ವಿಧಿಸುತ್ತಿದ್ದಾರೆ. ಇದು ಕೇವಲ ಮುಖ್ಯರಸ್ತೆಗಷ್ಟೇ ಸೀಮಿತವಾಗಬಾರದು. ತ್ಯಾಜ್ಯ ಬಿಸಾಡುವ ಹಾಗೂ ಎಲ್ಲ ರಸ್ತೆಗಳು ಹಾಗೂ ಬಡಾವಣೆಗಳಿಗೂ ಭೇಟಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕಸಾಯಿಖಾನೆ ಸಮಸ್ಯೆ: ನಗರದ ಕೇಂದ್ರ ಪ್ರದೇಶವಲ್ಲದೆ ಹೊರವಲಯದ ತ್ಯಾಜ್ಯ ಸಮಸ್ಯೆ, ಕಸಾಯಿಖಾನೆ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆ ಬಗೆಹರಿಸಲು ಶಾಸಕ ಜಿ.ಟಿ‌.ದೇವೇಗೌಡ ಅವರೊಂದಿಗೆ ಚರ್ಚೆ ನಡೆಸಿದ್ದಾಗಿ ಎಂದು ತಿಳಿಸಿದರು.

‘ನಾನು ಮೇಯರ್ ಆಗಲು ಅವಕಾಶ ಮಾಡಿಕೊಟ್ಟ ಪಕ್ಷದ ವರಿಷ್ಠ ಹಾಗೂ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಹಾಗೂ ಈ ಭಾಗದ ಶಾಸಕರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಅಹ್ಮದ್ ಉರ್ಫ್‌ ಬಾಬು, ಪಾಳಿಕೆ ಮಾಜಿ ಸದಸ್ಯ ನಸ್ರುದ್ದೀನ್ ಬಾಬು, ಎನ್‌.ಆರ್. ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧಯ್ಕಷ ಇಮ್ರಾನ್, ಮುಖಂಡರಾದ ಸೈಯ್ಯದ್ ರಹಮತ್‌ವುಲ್ಲಾ, ಅಲೀಂ ಉಪಸ್ಥಿತರಿದ್ದರು.

ನಂಬರ್‌ ಒನ್ ಆಗಲು ಸಹಕರಿಸಿ: ಮೇಯರ್ ಮನವಿ

ಸ್ವಚ್ಛ ಸರ್ವೇಕ್ಷಣ ತಂಡ ನಗರದ ಎಲ್ಲೆಡೆ ಸಮೀಕ್ಷೆ ನಡೆಸುತ್ತಿದೆ. ಎಲ್ಲ ವಿಭಾಗದಲ್ಲೂ ಉತ್ತಮ ಅಭಿಪ್ರಾಯ ಬರುತ್ತಿದೆ. ನಾಗರಿಕರು ಫೋನ್‌ ಕರೆ ಹಾಗೂ ಆ್ಯಪ್‌ ಮೂಲಕ ಅಭಿಪ್ರಾಯವನ್ನು ಇನ್ನೂ ಹೆಚ್ಚಾಗಿ ತಿಳಿಸಿ ಮೈಸೂರು ನಗರ ಮತ್ತೆ ನಂಬರ್‌ ಒನ್ ಆಗಲು ಸಹಕರಿಸಬೇಕು ಎಂದು ಎಂದು ಮೇಯರ್ ತಸ್ನೀಂ ಮನವಿ ಮಾಡಿದರು.

ಒಬ್ಬರಿಗೆ ಎರಡು ಬಾರಿ ಕರೆ ಮಾಡಲು ಹಾಗೂ ಆ್ಯಪ್‌ ಮೂಲಕ ಉತ್ತರಿಸಲು ಅವಕಾಶ ಇದೆ. ಇನ್ನು ಕೇವಲ 10 ದಿನ ಮಾತ್ರ ಅಭಿಪ್ರಾಯ ತಿಳಿಸಲು ಅವಕಾಶವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ನಗರಕ್ಕೆ ಮತ್ತೆ ನಂಬರ್‌ ಒನ್ ಪಟ್ಟ ದೊರೆಯುವಂತೆ ಮಾಡಿ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT