ಮತ್ತೆ ಕಾಂಗ್ರೆಸ್–ಜೆಡಿಎಸ್ ಸರ್ಕಾರ: ವೀರಪ್ಪ ಮೊಯಿಲಿ

ಮೈಸೂರು: ಉಪಚುನಾವಣೆ ಬಳಿಕ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ತಿಳಿಸಿದರು.
ಚುನಾವಣಾ ರಾಜಕೀಯ ಹಾಗೂ ಸರ್ಕಾರ ರಚನೆಯ ರಾಜಕೀಯಕ್ಕೆ ವ್ಯತ್ಯಾಸವಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಮಾಡಿಕೊಂಡ ಮೈತ್ರಿ ಫಲ ನೀಡಲಿಲ್ಲ. ಹಾಗಾಗಿ, ಚುನಾವಣೋತ್ತರ ಮೈತ್ರಿಗೆ ಚಿಂತನೆ ನಡೆದಿದೆ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಿ ಫಲಿತಾಂಶದ ನಂತರ ಮೈತ್ರಿ ಮಾಡಿಕೊಳ್ಳುವ ತಂತ್ರವನ್ನು ಮಹಾರಾಷ್ಟ್ರದಲ್ಲಿ ಅನುಸರಿಸಲಾಗಿದೆ. ಇದೇ ತಂತ್ರಗಾರಿಕೆ ರಾಜ್ಯದಲ್ಲೂ ಬಳಕೆಯಾಗಲಿದೆ ಎಂದರು.
ಉಪಚುನಾವಣೆಯಲ್ಲಿ ಅನರ್ಹರು ಕೇವಲ 1ರಿಂದ 2 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್ ಕನಿಷ್ಠ ಎಂದರೂ 12 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಕ್ರಿಯಿಸಿ (+)