ಕೃಷಿ ಕ್ಷೇತ್ರ; ದ್ವಂದ್ವ ನಿಲುವು

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಜೆಟ್ ನಿರಾಸೆ ಮೂಡಿಸಿದೆ. ಹಲವು ದ್ವಂದ್ವಗಳಿವೆ. ಶೂನ್ಯ ಬಂಡವಾಳ ಕೃಷಿ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬೇಕಾಗಿರುವುದು ಮಾನವ ಸಂಪನ್ಮೂಲ. ಆದರೆ, ಕೌಶಲಾಭಿವೃದ್ಧಿ ತರಬೇತಿ ನೀಡಿ ಗ್ರಾಮೀಣ ಯುವಕರನ್ನು ಬೇರೆಯೇ ಕ್ಷೇತ್ರಗಳತ್ತ ಸೆಳೆಯುವ ಯೋಜನೆಯೂ ಇದೆ. ಆಗ ಕೃಷಿಗೆ ಮಾನವ ಸಂಪನ್ಮೂಲವೇ ಸಿಗುವುದಿಲ್ಲ. ರೈತರ ಆದಾಯವನ್ನು ಹೇಗೆ ದ್ವಿಗುಣಗೊಳಿಸುತ್ತಾರೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ, ವಿವಿಧ ಯೋಜನೆ ಕಲ್ಪಿಸಲು ಖಾಸಗಿ ಹೂಡಿಕೆದಾರರ ಮೊರೆ ಹೋಗುತ್ತಿರುವುದು ಅಪಾಯಕಾರಿ.
–ಕೆ.ಎಸ್.ನಂದಿನಿ ಜಯರಾಂ,
ರೈತ ಮುಖಂಡರು, ಮಂಡ್ಯ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.