ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವಾಯುಮಾಲಿನ್ಯದಲ್ಲಿ ಗಮನಾರ್ಹ ಇಳಿಕೆ

ಲಾಕ್‌ಡೌನ್‌ ಪರಿಣಾಮ: ನಿಯಂತ್ರಣಕ್ಕೆ ಬಂದ ಮಾಲಿನ್ಯ ಪ್ರಮಾಣ, ಸಾರ್ವಜನಿಕರಲ್ಲಿ ಸಂತಸ
Last Updated 28 ಮಾರ್ಚ್ 2020, 8:57 IST
ಅಕ್ಷರ ಗಾತ್ರ

ಮೈಸೂರು: ‘ಲಾಕ್‌ಡೌನ್‌’ನಿಂದಾಗಿ ವಾಯು ಮಾಲಿನ್ಯದ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಹೆಬ್ಬಾಳದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಮಾಲಿನ್ಯ ಮಾಪನ ಕೇಂದ್ರದ ಅಂಕಿಅಂಶಗಳು ಈ ಅಂಶವನ್ನು ದೃಢೀಕರಿಸುತ್ತವೆ.

ಮಾರ್ಚ್ 21ರಂದು ‘ಪಿಎಂ 10’ ಅಂಶವು 88.02 ಇದ್ದದ್ದು, ಜನತಾ ಕರ್ಫ್ಯೂ ದಿನ 40.96ಕ್ಕೆ ಇಳಿಕೆ ಕಂಡಿದೆ. ಪಿಎಂ 2.5 ಅಂಶವು 26.73ರಿಂದ 20.01, ಸಾರಜನಕದ ಡೈ ಆಕ್ಸೈಡ್‌ ಪ್ರಮಾಣ 34.48ರಿಂದ 9.13 ಹಾಗೂ ಗಂಧಕದ ಡೈ ಆಕ್ಸೈಡ್‌ 1.16 ರಿಂದ 0.34ಗೆ ಇಳಿಕೆಯಾಗಿತ್ತು.

ಇದರ ಮರು ದಿನ ಅಂದರೆ ಮಾರ್ಚ್ 23ರಂದು ‘ಪಿಎಂ 10’ ಅಂಶವು 49.79, ಪಿಎಂ 2.5 ಅಂಶವು 21.87 ಹಾಗೂ ಸಾರಜನಕದ ಡೈ ಆಕ್ಸೈಡ್‌ ಪ್ರಮಾಣ 14.99 ಹಾಗೂ ಗಂಧಕದ ಡೈ ಆಕ್ಸೈಡ್‌ 0.25 ಇತ್ತು ಎಂದು ಅಂಕಿ ಅಂಶ ಹೇಳುತ್ತವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಾಶ್, ‘ಲಾಕ್‌ಡೌನ್‌ನಿಂದ ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವುದು ನಿಜ. ಇದೊಂದು ಸಕಾರಾತ್ಮಕ ಪರಿಣಾಮ’ ಎಂದು ತಿಳಿಸಿದರು.

ಪಿಎಂ 10 ಮತ್ತು ಪಿಎಂ 2.5 ಎಂದರೆ ಏನು?

ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ಅವುಗಳ ಗಾತ್ರಕ್ಕೆ ತಕ್ಕಂತೆ ಪಿಎಂ 10, ಪಿಎಂ 2.5 ಎಂದು ಕರೆಯಲಾಗುತ್ತದೆ. ಪಿಎಂ ಎಂದರೆ ‘ಪರ್ಟಿಕ್ಯುಲೇಟ್ ಮ್ಯಾಟರ್’ ಎಂದರ್ಥ. ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಸಾರಜನಕದ ಆಕ್ಸೈಡ್‌ನ ಕಣಗಳು ಈ ಸೂಕ್ಷ್ಮರೂಪದಲ್ಲಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT