ಸೋಮವಾರ, ನವೆಂಬರ್ 30, 2020
19 °C
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ 5 ಪುಸ್ತಕಗಳ ಬಿಡುಗಡೆ

‘ಅಲಮೇಲಮ್ಮನ ಶಾಪ’ದ ಅಧ್ಯಯನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಅಲಮೇಲಮ್ಮನ ಶಾಪ‍ದ ಕುರಿತು ಹೆಚ್ಚು ಅಧ್ಯಯನ ನಡೆಯ ಬೇಕಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿ ಯಿಂದ ಇಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ‘ಆರ್ಕಿಯಾಲಜಿಕಲ್‌ ಎಸ್ಕವೇಶನ್ ಅಟ್ ತಲಕಾಡು’, ಕರ್ನಾಟಕದಲ್ಲಿ ಬೌದ್ಧ ಕಲೆ ಮತ್ತು ಸಂಸ್ಕೃತಿ, ಹಂಪಿ ಸ್ಪೆಂಡರ್ ದಟ್ ವಾಸ್, ಮೈಸೂರು ದಸರಾ ರಾಜ್ಯ ಹಬ್ಬ, ಕರ್ನಾಟಕ ವಾಸ್ತುಶಿಲ್ಪದ ಉದ್ಯಾನ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಅಲಮೇಲಮ್ಮ ನವರ ಶಾಪದಂತೆ ತಲಕಾಡು ಮರ ಳಾಗಿದೆ, ಮಾಲಂಗಿ ಮಡುವಾಗಿದೆ. ಮೈಸೂರು ರಾಜವಂಶಸ್ಥರಲ್ಲಿ ದತ್ತು ಸ್ವೀಕಾರ ಪದ್ಧತಿ ಇದೆ. ವಿಜ್ಞಾನಕ್ಕೂ ಇದು ಸವಾಲಾಗಿದೆ. ಸಾತ್ವಿಕ ಶಕ್ತಿ ಧಾರಣೆಯ ಶಾಪದ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೆಕಾಲೆ ಪ್ರೇರಿತ ಶಿಕ್ಷಣ ನೀತಿಯಿಂದ ನಮ್ಮಲ್ಲಿ ಕೀಳರಿಮೆ ಉಂಟಾಗಿದೆ. ದುರುದ್ದೇಶಪ್ರೇರಿತವಾದ ಈ ಶಿಕ್ಷಣ ನೀತಿಯನ್ನೇ ಇಂದಿಗೂ ಅನುಸರಿಸುವುದು ಸರಿಯಲ್ಲ ಎಂದರು.

ನಾಗರಿಕತೆ, ಜ್ಞಾನ, ವಿಜ್ಞಾನ ಬಂದುದು ಪಾಶ್ಚಾತ್ಯರಿಂದ ಎಂಬ ಭ್ರಮೆ ಯನ್ನು ಮೆಕಾಲೆ ಶಿಕ್ಷಣ ನೀತಿ ಮೂಡಿಸಿದೆ. ಆದರೆ, ನಮ್ಮಲ್ಲಿರುವ ದೇವಾಲಯಗಳು ಕೇವಲ ದೇವಾಲಯಗಳು ಮಾತ್ರವೇ ಆಗಿರದೇ ವಿಜ್ಞಾನವನ್ನು ಸಾಕ್ಷೀಕರಿಸಿದ ರೂಪಗಳಾಗಿವೆ. ವಿಮಾನ ಮತ್ತು ರಾಕೆಟ್‌ಗಳ ರೂಪಗಳನ್ನು ಇವುಗಳಲ್ಲಿ ಕೆತ್ತಲಾಗಿದೆ. ಇನ್ನಾದರೂ ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದರು.

ತಲಕಾಡಿನಲ್ಲಿ 2ನೇ ಶತಮಾನದಲ್ಲಿದ್ದ ಒಬ್ಬ ಅಕ್ಕಸಾಲಿಗ ರೋಮನ್ ನಾಣ್ಯಗಳನ್ನು ನಕಲು ಮಾಡುತ್ತಿದ್ದ ಎಂದು ಇತ್ತೀಚಿನ ಸಂಶೋಧನೆ ಹೇಳುತ್ತದೆ. ತಲಕಾಡಿನ ಜತೆ ರೋಮ್ ನಗರ ವ್ಯಾಪಾರ ಸಂಬಂಧ ಹೊಂದಿತ್ತು ಎಂಬುದಕ್ಕೆ ಇದೇ ನಿದರ್ಶನ ಎಂದು ತಿಳಿಸಿದರು.

ಸಚಿವ ಎಸ್.ಟಿ.ಸೋಮಶೇಖರ್, ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಲೇಖಕ ಎಂ.ಎಸ್.ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.