ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಣಿ ಸಿಂಧೂರಿ ವಿರುದ್ಧ ಆರೋಪ; 1200 ಪುಟಗಳ ದಾಖಲೆ ಸಲ್ಲಿಸಿದ ಶಾಸಕ ಮಹೇಶ್

Last Updated 19 ಆಗಸ್ಟ್ 2022, 22:12 IST
ಅಕ್ಷರ ಗಾತ್ರ

ಮೈಸೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ 1,200 ಪುಟಗಳ ದಾಖಲೆಗಳನ್ನುಶಾಸಕ ಸಾ.ರಾ.ಮಹೇಶ್‌ ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ.ರವಿಶಂಕರ್‌ ಅವರಿಗೆ ಸಲ್ಲಿಸಿದರು.

ಆರೋಪಗಳ ಕುರಿತು ಪ್ರಾಥಮಿಕ ತನಿಖೆಯನ್ನು ನಡೆಸಲಿದ್ದು, ಮಾಹಿತಿ, ಹೇಳಿಕೆ, ದಾಖಲೆಗಳನ್ನು ನೀಡಬೇಕೆಂದು ಆ.10ರಂದು ಕಾರ್ಯದರ್ಶಿ ನೋಟಿಸ್‌ ನೀಡಿದ್ದರು. ಮೈಸೂರು-ಚಾಮರಾಜನಗರ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳಿಂದ ಕಾರ್ಯದರ್ಶಿ ಮಾಹಿತಿ ಸಂಗ್ರಹಿಸಿದರು.

ನಂತರ ಸುದ್ದಿಗಾರರೊಂದಿಗೆ ಸಾ.ರಾ.ಮಹೇಶ್‌ ಮಾತನಾಡಿ, ‘ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿ ದ್ದಾಗ ಕರ್ತವ್ಯ ಲೋಪ ಎಸಗಿದ್ದಾರೆ. ಭ್ರಷ್ಟಾಚಾರ ನಡೆಸಿದ್ದಾರೆ. ಚಾಮರಾಜನಗರದ ಆಮ್ಲಜ ನಕದ ದುರಂತಕ್ಕೂ ಕಾರಣವಾಗಿದ್ದಾರೆ’ ಎಂದರು.

‘ನಿಯಮ ಉಲ್ಲಂಘಿಸಿ ಜಿಲ್ಲಾಧಿಕಾರಿ ನಿವಾಸವನ್ನು ₹16.35 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿಸಿದ್ದಾರೆ. ನಿರ್ಮಿತಿ ಕೇಂದ್ರದ ಹಣವನ್ನು ದುರುಪಯೋಗ ಮಾಡಿದ್ದಾರೆ. ನಿವಾಸವು ಪಾರಂಪರಿಕ ಕಟ್ಟಡವಾಗಿದ್ದರೂ ಆವರಣದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಈಜುಕೊಳ, ಜಿಮ್‌ ನಿರ್ಮಿಸಿದ್ದಾರೆ. ಸ್ಥಳೀಯ ಸಂಸ್ಥೆಗಳನ್ನು ನಿರ್ಲಕ್ಷಿಸಿ ಪರಿಸರ ಸ್ನೇಹಿ ಬ್ಯಾಗ್‌ ವಿತರಣೆಗಾಗಿ ₹ 9 ಬದಲು ₹ 52ಗೆ ಖರೀದಿಸಲು ಅನುಮೋದನೆ ನೀಡಿದ್ದರು’ ಎಂದು ದೂರಿದರು.

‘ಮೈಸೂರಿನಿಂದ ಚಾಮರಾಜ ನಗರಕ್ಕೆ ಪೂರೈಕೆಯಾಗಬೇಕಿದ್ದ ಆಮ್ಲಜನಕ ಸಿಲಿಂಡರ್‌ಗಳನ್ನು ಅವರು ತಡೆಹಿಡಿದಿದ್ದರಿಂದಲೇ ದುರಂತ ಸಂಭವಿಸಿತು’ ಎಂದರು.

‘ಸಾವಿನ ಸಂಖ್ಯೆ ಮುಚ್ಚಿಡಲಾಗಿತ್ತು’
‘2021ರ ಮೇ ತಿಂಗಳಲ್ಲಿ 1,342 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರೂ,ದಕ್ಷ ಅಧಿಕಾರಿ ಎಂದು ನಿರೂಪಿಸಿಕೊಳ್ಳಲು 269 ಜನ ಸತ್ತಿದ್ದಾರೆಂಬ ಸುಳ್ಳು ಲೆಕ್ಕವನ್ನು ರೋಹಿಣಿ ನೀಡಿದ್ದರು. ಎಲ್ಲ ಸ್ಮಶಾನಗಳನ್ನು ಪರಿಶೀಲಿಸಿದಾಗ ಸಾವಿರಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಸಾವಿರ ಕುಟುಂಬಗಳಿಗೆ ಕೋವಿಡ್‌ ಪರಿಹಾರ ಸಿಗದಂತೆ ಮಾಡಿದ್ದರು’ ಎಂದು ಸಾ.ರಾ.ಮಹೇಶ್‌ ಆರೋಪಿಸಿದರು.

‘ಭ್ರಷ್ಟಾಚಾರ, ನೂರಾರು ಮಂದಿ ಸಾವಿಗೆ ಕಾರಣರಾದ ಅಧಿಕಾರಿಯ ಆರೋಪಗಳು ಸಾಬೀತಾದರೆ ಕರ್ತವ್ಯದಿಂದ ಅಮಾನತಾಗುತ್ತಾರೆ. ಆದರೆ, ಕೋವಿಡ್‌ನಿಂದ ಜೀವ ಕಳೆದುಕೊಂಡವರ ಬೆಲೆ ಕಟ್ಟಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

*

ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರಿವುದು ಅಕ್ಷಮ್ಯ. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿರುವುದು ಸರಿಯಲ್ಲ.
–ಸಾ.ರಾ.ಮಹೇಶ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT